Asianet Suvarna News Asianet Suvarna News

ಸ್ಮಿತ್-ವಾರ್ನರ್ ಈಗಲೂ ಶ್ರೇಷ್ಠ ಕ್ರಿಕೆಟಿಗರು ಎಂದ ರೋಹಿತ್ ಶರ್ಮಾ

ಸ್ಮಿತ್ ಹಾಗೂ ವಾರ್ನರ್ ಅವರನ್ನು ಆಸೀಸ್ ಕ್ರಿಕೆಟ್ ಮಂಡಳಿ ಒಂದು ವರ್ಷದ ಮಟ್ಟಿಗೆ ನಿಷೇಧ ಹೇರಿದ ಬಗ್ಗೆ ಅನುಕಂಪ ವ್ಯಕ್ತಪಡಿಸಿರುವ ರೋಹಿತ್, ಏರ್'ಫೋರ್ಟ್'ನಿಂದ ಬಂದಿಳಿಯುತ್ತಿದ್ದಂತೆ ಸುದ್ದಿಗೋಷ್ಠಿಯಲ್ಲಿ ಬಿಕ್ಕಳಿಸುತ್ತಾ ಕ್ಷಮೆ ಯಾಚಿಸಿದ್ದು ನನ್ನ ಕಿವಿಯಲ್ಲಿ ಮತ್ತೆ ಅನುರಣಿಸುತ್ತಿದೆ ಎಂದು ರೋಹಿತ್ ಟ್ವೀಟ್ ಮಾಡಿದ್ದಾರೆ.

Smith Warner still great players says Rohit

ಬಾಲ್ ಟ್ಯಾಂಪರಿಂಗ್ ವಿಚಾರವೊಂದನ್ನು ಗಮನದಲ್ಲಿಟ್ಟುಕೊಂಡು ಆಸೀಸ್ ನಾಯಕ ಸ್ಮಿತ್ ಹಾಗೂ ಉಪನಾಯಕ ವಾರ್ನರ್ ವೃತ್ತಿಜೀವನವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಸ್ಮಿತ್ ಹಾಗೂ ವಾರ್ನರ್ ಅವರನ್ನು ಆಸೀಸ್ ಕ್ರಿಕೆಟ್ ಮಂಡಳಿ ಒಂದು ವರ್ಷದ ಮಟ್ಟಿಗೆ ನಿಷೇಧ ಹೇರಿದ ಬಗ್ಗೆ ಅನುಕಂಪ ವ್ಯಕ್ತಪಡಿಸಿರುವ ರೋಹಿತ್, ಏರ್'ಫೋರ್ಟ್'ನಿಂದ ಬಂದಿಳಿಯುತ್ತಿದ್ದಂತೆ ಸುದ್ದಿಗೋಷ್ಠಿಯಲ್ಲಿ ಬಿಕ್ಕಳಿಸುತ್ತಾ ಕ್ಷಮೆ ಯಾಚಿಸಿದ್ದು ನನ್ನ ಕಿವಿಯಲ್ಲಿ ಮತ್ತೆ ಅನುರಣಿಸುತ್ತಿದೆ ಎಂದು ರೋಹಿತ್ ಟ್ವೀಟ್ ಮಾಡಿದ್ದಾರೆ.

ಕ್ರೀಡಾ ಸ್ಫೂರ್ತಿ ಮುಖ್ಯ ಎಂಬ ವಿಚಾರದಲ್ಲಿ ಎರಡು ಮಾತಿಲ್ಲ. ಅವರು ತಪ್ಪು ಮಾಡಿದ್ದಾರೆ, ಹಾಗೆಯೇ ಅದನ್ನು ಒಪ್ಪಿಕೊಂಡಿದ್ದಾರೆ. ಆಸೀಸ್ ಮಂಡಳಿಯ ತೀರ್ಮಾನವನ್ನು ಇಲ್ಲಿದ್ದು ಪ್ರಶ್ನಿಸುವುದು ಸರಿಯಲ್ಲ. ಆದರೆ ಆ ಇಬ್ಬರು ಕ್ರಿಕೆಟಿಗರು ಈಗಲೂ ನನ್ನ ಪಾಲಿಗೆ ಶ್ರೇಷ್ಠ ಕ್ರಿಕೆಟಿಗರು ಎಂದು ಹೇಳಿದ್ದಾರೆ.  

Follow Us:
Download App:
  • android
  • ios