ವಿಶ್ವಕಪ್ ಟೂರ್ನಿಗೆ ಶ್ರೀಲಂಕಾ ತಂಡ  ಪ್ರಕಟಗೊಂಡಿದೆ. ಬಲಿಷ್ಠ ತಂಡ ಪ್ರಕಟಿಸಿರುವ ಲಂಕಾ ಮಂಡಳಿ ಕೆಲ ಅಚ್ಚರಿ ಆಯ್ಕೆಗಳನ್ನು ಮಾಡಿದೆ. ಇಲ್ಲಿದೆ ತಂಡದ ವಿವರ.

ಕೊಲೊಂಬೊ(ಏ.18): ವಿಶ್ವಕಪ್ ಟೂರ್ನಿಗೆ ಎಲ್ಲಾ ರಾಷ್ಟ್ರಗಳು ತಂಡ ಪ್ರಕಟಿಸುತ್ತಿದೆ. ಭಾರತ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಬಹುತೇಕ ರಾಷ್ಟ್ರಗಳು ಈಗಾಗಲೇ ತಂಡ ಪ್ರಕಟಿಸಿದೆ. ಇದೀಗ ಶ್ರೀಲಂಕಾ ವಿಶ್ವಕಪ್ ಟೂರ್ನಿಗೆ ಬಲಿಷ್ಠ 15 ಸದಸ್ಯರ ತಂಡ ಪ್ರಕಟಿಸಿದೆ. ವಿಶೇಷ ಅಂದರೆ ಮೂವರು ಮಾಜಿ ನಾಯಕರಿಗೆ ಸ್ಥಾನ ನೀಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ವಿಶ್ವಕಪ್ 2019: ರಾಯುಡು, ಪಂತ್’ಗೆ ಗುಡ್’ನ್ಯೂಸ್..!

ಲಂಕಾ ವಿಶ್ವಕಪ್ ತಂಡ ಪ್ರಕಟಕ್ಕೂ ಮೊದಲೇ ನಾಯಕನ ಹೆಸರು ಬಹಿರಂಗ ಪಡಿಸಿತ್ತು. ದಿಮುತ್ ಕರುಣಾರತ್ನೆಗೆ ನಾಯಕತ್ವ ನೀಡಲಾಗಿದೆ. ತಂಡದಲ್ಲಿ ಮಾಜಿ ನಾಯಕರಾದ ವೇಗಿ ಲಸಿತ್ ಮಾಲಿಂಗ, ಎಂಜಲೋ ಮ್ಯಾಥ್ಯೂಸ್ ಹಾಗೂ ತಿಸರಾ ಪರೇರಾಗೆ ಸ್ಥಾನ ನೀಡಲಾಗಿದೆ. ಈ ಮೂಲಕ ಅನುಭವಿ ಹಾಗೂ ಯುಕರ ತಂಡವನ್ನು ಪ್ರಕಟಿಸಲಾಗಿದೆ.

Scroll to load tweet…