ಎಂ.ಎಸ್​​​ ಧೋನಿ ನಾಯಕನಾಗಿದ್ದಾಗ ಟೀಂ ಇಂಡಿಯಾವನ್ನು ಚೆನ್ನೈ ಸೂಪರ್​​​ ಕಿಂಗ್ಸ್​​​​ ತಂಡ ಎಂದೇ ಕರೆಯುತ್ತಿದ್ದರು. ಆದರೆ ವಿರಾಟ್​​ ಕೊಹ್ಲಿ ನಾಯಕತ್ವ ವಹಿಸಿಕೊಂಡು ಹೆಚ್ಚು ದಿನಗಳೂ ಕಳೆದಿಲ್ಲ. ಆಗಲೇ ಭಾರತ ತಂಡವನ್ನು ಆರ್'​​​ಸಿಬಿ ತಂಡ ಅಂತ ಕರೆಯಲು ಶುರುಮಾಡಿದ್ದಾರೆ. ಅದಕ್ಕೆ ಕಾರಣ ಏನು​​ ಗೊತ್ತಾ..? ಹಾಗಾದ್ರೆ ಈ ಸ್ಟೋರಿ ಓದಿ

ಎಂ.ಎಸ್​​​ ಧೋನಿ ನಾಯಕನಾಗಿದ್ದಾಗ ಟೀಂ ಇಂಡಿಯಾವನ್ನು ಚೆನ್ನೈ ಸೂಪರ್​​​ ಕಿಂಗ್ಸ್​​​​ ತಂಡ ಎಂದೇ ಕರೆಯುತ್ತಿದ್ದರು. ಆದರೆ ವಿರಾಟ್​​ ಕೊಹ್ಲಿ ನಾಯಕತ್ವ ವಹಿಸಿಕೊಂಡು ಹೆಚ್ಚು ದಿನಗಳೂ ಕಳೆದಿಲ್ಲ. ಆಗಲೇ ಭಾರತ ತಂಡವನ್ನು ಆರ್'​​​ಸಿಬಿ ತಂಡ ಅಂತ ಕರೆಯಲು ಶುರುಮಾಡಿದ್ದಾರೆ. ಅದಕ್ಕೆ ಕಾರಣ ಏನು​​ ಗೊತ್ತಾ..? ಹಾಗಾದ್ರೆ ಈ ಸ್ಟೋರಿ ಓದಿ

ಐಪಿಎಲ್​​​ ಆರಂಭಕ್ಕೆ ಇನ್ನೂ ಎರಡು ತಿಂಗಳು: ಈಗಾಗಲೇ ಶುರುವಾಗಿದೆ RCB ಜಪ

10ನೇ ಆವೃತ್ತಿಯ ಐಪಿಲ್​ ಹಬ್ಬ ಶುರುವಾಗೋಕೆ ಇನ್ನೂ ಎರಡು ತಿಂಗಳು ಬಾಕಿ ಇದೆ. ಈ ಜಾತ್ರೆಗಾಗಿ ಎಲ್ಲಾ ಸಿದ್ಧತೆಗಳು ಶುರುವಾಗಿದೆ. ಆದ್ರೆ ಅಭಿಮಾನಿಗಳು ಮಾತ್ರ ಈ ಬಾರಿ ಆರ್​​​ಸಿಬಿಯೇ ಗೆಲ್ಲೋದು ಅಂತ ಕನ್​​ಫರ್ಮ್​ ಮಾಡಿಕೊಂಡಿದ್ದಾರೆ.

CSK ತಂಡವಾಗಿತ್ತು ಟೀಂ ಇಂಡಿಯಾ

​​ ಕೆಲ ವರ್ಷದ ಹಿಂದೆ ಧೋನಿ ನಾಯಕತ್ವದ ಟೀಂ ಇಂಡಿಯಾವನ್ನು ಎಲ್ಲರೂ ಚೆನ್ನೈ ಸೂಪರ್​​ ಕಿಂಗ್ಸ್​​ ತಂಡ ಎಂದೇ ಕರೆಯುತ್ತಿದ್ದರು. ಕಾರಣ ಧೋನಿ ಮುನ್ನಡೆಸುತ್ತಿದ್ದ ಟೀಂ ಇಂಡಿಯದಲ್ಲಿ ಅರ್ಧದಷ್ಟು ಆಟಗಾರರು ಧೋನಿಯೇ ನಾಯಕನಾಗಿದ್ದ ಐಪಿಎಲ್​ನ ಚೆನ್ನೈ ಸೂಪರ್​​ ಕಿಂಗ್ಸ್​​'ನ ಆಟಗಾರರಾಗಿದ್ದರು.

ಹೌದು, ಇದು ನಂಬಲು ಕಷ್ಟವಾದರೂ ಸತ್ಯ. ಐಪಿಎಲ್​​​ 8ನೇ ಆವೃತ್ತಿ ಅಂದರೆ 2015ರಲ್ಲಿ ಚೆನ್ನೈ ತಂಡದಲ್ಲಿದ್ದ ಧೋನಿ, ಸುರೇಶ್​​ ರೈನಾ, ಆಶೀಶ್​​ ನೆಹ್ರಾ, ಆರ್​​. ಅಶ್ವಿನ್​​, ಮೋಹಿತ್​​ ಶರ್ಮಾ, ರವೀಂದ್ರ ಜಡೇಜಾ ಎಲ್ಲರೂ ಟೀಂ ಇಂಡಿಯಾದ ಖಾಯಂ ಆಟಗಾರರಾಗಿದ್ದರು. ಆಡುವ ಹನ್ನೊಂದರಲ್ಲಿ ಅರ್ಧಕ್ಕಿಂತ ಹೆಚ್ಚು ಸಿಎಸ್​ಕೆ ಆಟಗಾರರೇ ಇದ್ರು. ಆದ್ರಿಂದ ಕ್ರಿಕೆಟ್​​ ಅಭಿಮಾನಿಗಳು ಟೀಂ ಇಂಡಿಯಾವನ್ನು ಚೆನ್ನೈ ಸೂಪರ್​​ ಕಿಂಗ್ಸ್​​ ಎಂದೇ ಕರೆಯುತ್ತಿದ್ದರು.

ಹಿಸ್ಟರಿ ರಿಪೀಟ್ಸ್​​​​: ಆಗ CSK, ಈಗ RCB ಯಾಗಿದೆ ಟೀಂ ಇಂಡಿಯಾ

​​​ಈಗ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವುದು ವಿರಾಟ್​​ ಕೊಹ್ಲಿ. ಈಗ ಟೀಂ ಇಂಡಿಯಾವನ್ನು RCB ಅಂತ ಕರೆಯುತ್ತಾರಾ ಅಂತ ಕೇಳಬಹುದು. ಹೌದು, ಹಿಸ್ಟರಿ ರಿಪೀಟ್​​ ಆಗಿದೆ. ಈಗಾಗಲೇ ಟೀಂ ಇಂಡಿಯಾವನ್ನು RCB ಎಂದು ಕರೆಯಲು ಶುರು ಮಾಡಿದ್ದಾರೆ. ಕಾರಣ ಟೀಂ ಇಂಡಿಯಾದಲ್ಲಿ ಅರ್ಧ ಆಟಗಾರರು RCB ಪರ ಆಡುತ್ತಿರುವವರೇ ಇದ್ದಾರೆ.

ಟೀಂ ಇಂಡಿಯಾದಲ್ಲಿದ್ದಾರೆ 6 RCB ಆಟಗಾರರು

ಸದ್ಯ ಟೀಂ ಇಂಡಿಯಾದ ನಾಯಕನಾಗಿರುವ ವಿರಾಟ್​​ ಕೊಹ್ಲಿ RCB ನಾಯಕ. ಕೊಹ್ಲಿ ಜೊತೆ ಕೆ.ಎಲ್​.​​ ರಾಹುಲ್​​​​, ಯುಜವೇಂದ್ರ ಚಹಾಲ್​​, ಕೇದರ್​​​ ಜಾಧವ್​​​, ಮಂದೀಪ್​​ ಸಿಂಗ್​​​, ಪರ್ವೇಜ್​​​ ರಸೂಲ್​​​​​​ RCB ಆಟಗಾರರು ಟೀಂ ಇಂಡಿಯಾದಲ್ಲಿ ಆಡುತ್ತಿದ್ದಾರೆ.

ಸದ್ಯ ಟೀಂ ಇಂಡಿಯಾದಲ್ಲಿ RCB ಹಾವಳಿ ಜಾಸ್ತಿಯಾಗಿದೆ. ಆರ್​​​ಸಿಬಿ ತಂಡದವರೇ ಟೀಂ ಇಂಡಿಯಾದ ಟ್ರಂಪ್​​​ ಕಾರ್ಡ್​ಗಳಾಗಿದ್ದಾರೆ. ಈ ಟ್ರಂಪ್​​ ಕಾರ್ಡ್​ಗಳನ್ನ ಬಳಸಿಕೊಂಡು ಕಳೆದ 9 ಬಾರಿಯಿಂದ ಸಾಧ್ಯವಾಗದ ಐಪಿಎಲ್ ಟ್ರೋಫಿ ಗೆಲ್ಲೋ ಕನಸನ್ನ ವಿರಾಟ್​ ಕೊಹ್ಲಿ ನನಸು ಮಾಡಿಕೊಳ್ತಾರಾ ನೋಡ್ಬೇಕು.