Asianet Suvarna News Asianet Suvarna News

ಸಿಂಗಾಪುರ ಓಪನ್‌: ಕ್ವಾರ್ಟರ್‌ಗೆ ಸೈನಾ, ಸಿಂಧು!

ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಸಿಂಧು, ಸೈನಾ ಹಾಗೂ ಶ್ರೀಕಾಂತ್ ಸಿಂಗಾಪುರ ಓಪನ್’ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಮುಂದಿನ ಹಂತದಲ್ಲಿ ಈ ಎಲ್ಲರಿಗೂ ಕಠಿಣ ಸವಾಲು ಎದುರಾಗಲಿದೆ...

Singapore Open 2019 Saina Sindhu enters quarter finals, Parupalli Kashyap ousted
Author
Singapore, First Published Apr 12, 2019, 11:23 AM IST

ಸಿಂಗಾಪುರ[ಏ.12]: ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್‌, ಪಿ.ವಿ. ಸಿಂಧು,ಕಿದಂಬಿ ಶ್ರೀಕಾಂತ್‌ ಹಾಗೂ ಸಮೀರ್‌ ವರ್ಮಾ ಇಲ್ಲಿ ನಡೆಯುತ್ತಿರುವ ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಾಬಲ್ಯ ಮುಂದುವರಿಸಿ, ಸಿಂಗಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಸಿಂಧು, ಡೆನ್ಮಾರ್ಕ್’ನ ಮಿಯಾ ಬ್ಲಿಚ್‌ಫೀಲ್ಡ್‌ ವಿರುದ್ಧ 21-13, 21-19 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಎಂಟರ ಘಟ್ಟದಲ್ಲಿ ಸಿಂಧು, ಚೀನಾದ ಚೀ ಯನ್ಯಾನ್‌ರನ್ನು ಎದುರಿಸಲಿದ್ದಾರೆ.

ಸಿಂಗಾಪುರ ಓಪನ್: 2ನೇ ಸುತ್ತಿಗೆ ಲಗ್ಗೆಯಿಟ್ಟ ಸಿಂಧು, ಸೈನಾ, ಶ್ರೀಕಾಂತ್

ಸಿಂಗಲ್ಸ್‌ನ ಮತ್ತೊಂದು ಪಂದ್ಯದಲ್ಲಿ ಸೈನಾ, ಥಾಯ್ಲೆಂಡ್‌ನ ಪೊರ್ನಾಪಾವೀ ಚೊಚುವಾಂಗ್‌ ಎದುರು 21-16, 18-21, 21-19 ಗೇಮ್‌ಗಳಲ್ಲಿ ಜಯ ಪಡೆದರು. ಮಲೇಷ್ಯಾ ಓಪನ್‌ನಲ್ಲಿ ಚೊಚುವಾಂಗ್‌ ಎದುರು ಸೈನಾ ಮೊದಲ ಸುತ್ತಲ್ಲಿ ಸೋತು ಹೊರಬಿದ್ದಿದ್ದರು.

ಶ್ರೀಕಾಂತ್‌ಗೆ ಜಯ: ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಶ್ರೀಕಾಂತ್‌, ಡೆನ್ಮಾರ್ಕ್ನ ಹನ್ಸ್‌ ಕ್ರಿಸ್ಟಿನ್‌ ವಿರುದ್ಧ 21-12, 23-21 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಕ್ವಾರ್ಟರ್‌ನಲ್ಲಿ ಶ್ರೀಕಾಂತ್‌, ವಿಶ್ವ ನಂ.1 ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ ಸೆಣಸಲಿದ್ದಾರೆ. ಇದೇ ವೇಳೆ ಸಮೀರ್‌ ವರ್ಮಾ, 2ನೇ ಸುತ್ತಿನ ಪಂದ್ಯದಲ್ಲಿ ಚೀನಾದ ಗುವಾಂಗ್ಜು ಲು ವಿರುದ್ಧ 21-15, 21-18 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಕ್ವಾರ್ಟರ್‌ನಲ್ಲಿ ಸಮೀರ್‌, ತೈಪೆಯ ಟಿನ್‌ ಚೆನ್‌ ಚೌ ವಿರುದ್ಧ ಸೆಣಸಲಿದ್ದಾರೆ. ಎಚ್‌.ಎಸ್‌.ಪ್ರಣಯ್‌ ಹಾಗೂ ಪಿ.ಕಶ್ಯಪ್‌, 2ನೇ ಸುತ್ತಿನಲ್ಲಿ ಸೋತು ಹೊರಬಿದ್ದರು.

ಇದೇ ವೇಳೆ, ಮಿಶ್ರ ಡಬಲ್ಸ್‌ ಪ್ರಿ ಕ್ವಾರ್ಟರ್‌ನಲ್ಲಿ ಪ್ರಣವ್‌ ಜೆರ್ರಿ ಚೋಪ್ರಾ-ಎನ್‌. ಸಿಕ್ಕಿ ರೆಡ್ಡಿ ಜೋಡಿ, 5ನೇ ಶ್ರೇಯಾಂಕಿತ ಹಾಂಕಾಂಗ್‌ನ ಟ್ಸಿ ಯಿಂಗ್‌ ಸೂಟ್‌-ತಂಗ್‌ ಚನ್‌ ಜೋಡಿ ವಿರುದ್ಧ 21-17, 6-21, 21-19 ಗೇಮ್‌ಗಳಲ್ಲಿ ಜಯ ಸಾಧಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios