ನವದೆಹಲಿ(ಸೆ.13): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರೆಸ್ಸೀವ್ ಕ್ರಿಕೆಟರ್. ಮೈದಾನಕ್ಕಿಳಿದರೆ ಕೊಹ್ಲಿ ಎದುರಾಳಿಗಳ ಮೇಲೆ ಸವಾರಿ ಮಾಡುತ್ತಾರೆ. ಆಕ್ರಮಣಕಾರಿ ಮನೋಭಾವದಿಂದಲೇ ಹೋರಾಡುತ್ತಾರೆ. ಆದರೆ ಕೊಹ್ಲಿ ಡ್ರೆಸ್ಸಿಂಗ್ ರೂಂನಲ್ಲಿರುವಾಗ, ರಿಲಾಕ್ಸ್ ಮೂಡ್‌ನಲ್ಲಿರುವಾಗ ಯಾವ ಹಾಡು ಹಾಡುತ್ತಾರೆ ಅನ್ನೋ ಪ್ರಶ್ನೆಗೆ ಶಿಖರ್ ಧವನ್ ಉತ್ತರ ನೀಡಿದ್ದಾರೆ. ಆದರೆ ಉತ್ತರಿಸುವ ವೇಳೆ ಕೊಹ್ಲಿ ಕಾಲೆಳೆದಿದ್ದಾರೆ.

ಇದನ್ನೂ ಓದಿ: ಕೋಟ್ಲಾ ಈಗ ಜೇಟ್ಲಿ ಕ್ರೀಡಾಂಗಣ; ಸಮಾರಂಭದಲ್ಲಿ ಕೊಹ್ಲಿ, ಅಮಿತ್ ಶಾ!

ದೆಹಲಿ ಫಿರೋಜ್ ಷಾ ಕೋಟ್ಲಾ ಮೈದಾನದ ಮರುನಾಮಕರಣ ಸಮಾರಂಭದಲ್ಲಿ ವಿರಾಟ್  ಕೊಹ್ಲಿ  ಕುರಿತು ರವಿ ಶಾಸ್ತ್ರಿಯಲ್ಲಿ ಪ್ರಶ್ನೆ ಕೇಳಲಾಗಿತ್ತು. ಆದರೆ ಶಾಸ್ತ್ರಿ, ತನಗಿಂತ ಉತ್ತಮವಾಗಿ ಶಿಖರ್ ಧವನ್ ಚೆನ್ನಾಗಿ ಬಲ್ಲರು ಎಂದು ಬಾಲನ್ನು ಧವನ್ ಕೋರ್ಟ್‌ಗೆ ಹಾಕಿದರು. ಕೊಹ್ಲಿ ಕೂಲ್ ಆಗಿರುವ ಯಾವ ಹಾಡು ಗುನುಗುತ್ತಾರೆ ಅನ್ನೋ ಪ್ರಶ್ನೆಗೆ ಉತ್ತರಿಸುವ ವೇಳೆ, ಮದುವೆಗೂ ಮೊದಲೋ ಅಥವಾ ಮದುವೆ ನಂತರವೂ ಎಂದು ಕೊಹ್ಲಿ ಕಾಲೆಳೆದಿದ್ದಾರೆ.

 

ಇದನ್ನೂ ಓದಿ: ಕ್ರೀಡಾಂಗಣದಲ್ಲಿ ಕೊಹ್ಲಿಗೆ ಕಿಸ್, ಅನುಷ್ಕಾ ದಿಲ್ ಖುಷ್!

ಕೊಹ್ಲಿ ಪಂಜಾಬಿ ಸೇರಿದಂತೆ ಹಳೆ ಹಾಡುಗಳನ್ನು ಗುನುಗುತ್ತಾರೆ  ಎಂದು ಧವನ್ ಹೇಳಿದ್ದಾರೆ. ದೆಹಲಿಯ ಕೋಟ್ಲಾ ಮೈದಾನ ಇದೀಗ ಇತ್ತೀಚೆಗೆ ನಿಧನರಾದ ಕೇಂದ್ರ ಮಾಜಿ ಸಚಿವ ಅರುಣ್ ಜೇಟ್ಲಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಗಿದೆ. ಇನ್ನು ಈ ಕ್ರೀಡಾಂಗಣದಲ್ಲಿನ ಸ್ಟ್ಯಾಂಡ್‌ಗೆ ವಿರಾಟ್ ಕೊಹ್ಲಿ ಸ್ಟ್ಯಾಂಡ್ ಎಂದು ಹೆಸರಿಡಲಾಗಿದೆ.