Asianet Suvarna News Asianet Suvarna News

ಕ್ರೀಡಾಂಗಣದಲ್ಲಿ ಕೊಹ್ಲಿಗೆ ಕಿಸ್, ಅನುಷ್ಕಾ ದಿಲ್ ಖುಷ್!

ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಕಿಸ್ ನೀಡಿರುವ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಅನುಷ್ಕಾ ಕಿಸ್ ಇದೀಗ ಸದ್ದು ಮಾಡುತ್ತಿದೆ.

Anushka sharma kissed hubby virat kohli during Ddca event at delhi
Author
Bengaluru, First Published Sep 13, 2019, 5:40 PM IST
  • Facebook
  • Twitter
  • Whatsapp

ನವದೆಹಲಿ(ಸೆ.13): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ, ನಟಿ ಅನುಷ್ಕಾ ಶರ್ಮಾ ಹಾಟ್ & ಕ್ಯೂಟ್ ಕಪಲ್ ಎಂದೇ ಗುರಿತಿಸಿಕೊಂಡಿದ್ದಾರೆ. ಹೀಗಾಗಿ ಈ ಜೋಡಿ ಎಲ್ಲೇ ಸಂಚರಿಸಿದರೂ ಅಭಿಮಾನಿಗಳ ಕಣ್ಣು ಇವರ ಮೇಲಿರುತ್ತೆ. ವಿರುಷ್ಕ ಜೋಡಿಯ ಸಣ್ಣ ಸಣ್ಣ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತೆ. ಇದೀಗ ಕ್ರೀಡಾಂಗಣದಲ್ಲಿ ಅನುಷ್ಕಾ ಶರ್ಮಾ, ಪತಿ ವಿರಾಟ್ ಕೊಹ್ಲಿಗೆ ಕಿಸ್ ನೀಡಿರುವುದು ವೈರಲ್ ಆಗಿದೆ.

ಇದನ್ನೂ ಓದಿ: ಕೋಟ್ಲಾ ಈಗ ಜೇಟ್ಲಿ ಕ್ರೀಡಾಂಗಣ; ಸಮಾರಂಭದಲ್ಲಿ ಕೊಹ್ಲಿ, ಅಮಿತ್ ಶಾ!

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನ ಹೆಸರು ಹಾಗೂ ಸ್ಟ್ಯಾಂಡ್ ಮರುನಾಮಕರಣ ಸಮಾರಂಭದಲ್ಲಿ ಅನುಷ್ಕಾ ಶರ್ಮಾ, ಕೊಹ್ಲಿಗೆ ಕಿಸ್ ನೀಡಿದ ವಿಡಿಯೋ ವೈರಲ್ ಆಗಿದೆ. ಕೋಟ್ಲಾ ಮೈದಾನದವನ್ನು ಅರುಣ್ ಜೇಟ್ಲಿ ಕ್ರೀಡಾಂಗಣ ಎಂದು,  ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಸ್ಟ್ಯಾಂಡ್ ಎಂದು ಮರುನಾಮಕರ ಮಾಡಲಾಗಿದೆ. ಜವಾಹರ್ ಲಾಲ್ ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಕೊಹ್ಲಿ, ಅನುಷ್ಕಾ, ಟೀಂ ಇಂಡಿಯಾ ಕ್ರಿಕೆಟಿಗರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ಆರಂಭಕ್ಕೂ ಮುನ್ನ ಅನುಷ್ಕಾ ಕೊಹ್ಲಿಗೆ ಕಿಸ್ ನೀಡಿದ್ದಾರೆ.

 

ಇದನ್ನೂ ಓದಿ: ಸಕ್ಸಸ್ ಅಂದ್ರೆ ಇದೇ ಅಲ್ವಾ..? 2001ರಲ್ಲಿ ಕನ್ನಡಿಗನ ಆಟೋಗ್ರಾಫ್ ಕೇಳಿದ್ದ ಕೊಹ್ಲಿ..!

ಕಾರ್ಯಕ್ರಮಕ್ಕೆ ಆಗಮಿಸಿದ ವಿರುಷ್ಕಾ ಜೋಡಿ ಟೀಂ ಇಂಡಿಯಾ ಕ್ರಿಕೆಟಿಗರ ಜೊತೆ ಕುಳಿತಿದ್ದರು. ಇನ್ನೇನು ಕಾರ್ಯಕ್ರಮ ಆರಂಭಕ್ಕೆ ಕೆಲ ನಿಮಿಷಗಳಿರುವಾಗ ಅನುಷ್ಕಾ ಶರ್ಮಾ, ಕೊಹ್ಲಿ ಕೈಗೆ ಸಿಹಿ ಮುತ್ತು ನೀಡಿದರು. 

Follow Us:
Download App:
  • android
  • ios