ಬೆಂಗಳೂರು[ಜೂ.14]: ಇಂಡೋ-ಆಫ್ಘಾನ್ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರು. ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿರುವ ಟೀಂ ಇಂಡಿಯಾ ಮೊದಲ ದಿನದಾಟದಲ್ಲೇ ಬಿಗಿ ಹಿಡಿತ ಸಾಧಿಸಿದೆ. ಊಟದ ವಿರಾಮಕ್ಕೂ ಮೊದಲೇ ಶತಕ ಸಿಡಿಸಿದ ಭಾರತದ ಮೊದಲ ಹಾಗೂ ವಿಶ್ವದ 6ನೇ ಬ್ಯಾಟ್ಸ್’ಮನ್ ಎನ್ನುವ ಶ್ರೇಯಕ್ಕೆ ಧವನ್ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಗಬ್ಬರ್ ಸಿಂಗ್ ಖ್ಯಾತಿಯ ಧವನ್ ಮತ್ತೊಂದು ಪ್ರತಿಭೆ ಅನಾವರಣ..!

ಅದರಲ್ಲೂ ಗಬ್ಬರ್’ಸಿಂಗ್ ಖ್ಯಾತಿಯ ಶಿಖರ್ ಧವನ್ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಟೆಸ್ಟ್ ಕ್ರಿಕೆಟ್’ನಲ್ಲಿ ವೈಯುಕ್ತಿಕ 7ನೇ ಶತಕ ಪೂರೈಸಿದರು. ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್ ಮೂಡ್’ನಿಂದ ಇನ್ನೂ ಹೊರಬಂದಂತೆ ಕಾಣದ ಶಿಖರ್ ಧವನ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದರು. ಕೇವಲ 96 ಎಸೆತಗಳಲ್ಲಿ 107 ರನ್ ಸಿಡಿಸಿ ಮಿಂಚಿದರು. ಧವನ್ ಬ್ಯಾಟಿಂಗ್’ಅನ್ನು ಕಣ್ತುಂಬಿಕೊಂಡ ಟ್ವಿಟರಿಗರು ಧವನ್ ಆಫ್ಘಾನ್ ಟೆಸ್ಟ್ ಪಂದ್ಯವನ್ನು ಸನ್’ರೈಸರ್ಸ್ ಹೈದರಾಬಾದ್ ತಂಡದ ನೆಟ್ ಪ್ರಾಕ್ಟೀಸ್ ಎಂದು ತಪ್ಪಾಗಿ ಭಾವಿಸಿ ಬ್ಯಾಟ್ ಬೀಸುತ್ತಿದ್ದಾರೆ ತಮಾಶೆ ಮಾಡಿದ್ದಾರೆ. 

ಇದನ್ನೂ ಓದಿ: ಇಂಡೋ-ಆಫ್ಘಾನ್ ಟೆಸ್ಟ್: ಬೌಂಡರಿಗಳ ಸುರಿಮಳೆಯೊಂದಿಗೆ ಧವನ್ ಶತಕ

ಧವನ್ ಬ್ಯಾಟಿಂಗ್ ನೋಡಿ ಟ್ವಿಟರಿಗರು ತಲೆದೂಗಿದ್ದು ಹೀಗೆ..