ಸಂಜುನೇ ಬೆಸ್ಟ್; ಸೂರ್ಯಕುಮಾರ್ ಯಾದವ್ ವಾದದಲ್ಲಿ ಹುರುಳಿಲ್ಲ ಎಂದು ಮತ್ತೆ ಸಾಬೀತಾಯ್ತು!
ಸತತ ಮೂರು ಬಾರಿ ಡಕೌಟ್ ಆಗಿ ಫಾರ್ಮ್ ಕಳೆದುಕೊಂಡಿರುವ ಅಭಿಷೇಕ್ ಶರ್ಮಾ ಬದಲು ಸಂಜು ಸ್ಯಾಮ್ಸನ್‌ರನ್ನು ಆಡಿಸಬಹುದೇ ಎಂದು ಕೇಳಿದಾಗ, ಸೂರ್ಯಕುಮಾರ್ ಯಾದವ್ ನೀಡಿದ ಉತ್ತರ ಗಮನ ಸೆಳೆದಿತ್ತು. ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಅಗತ್ಯವಿಲ್ಲ, ಟೀಮ್ ಬ್ಯಾಲೆನ್ಸ್ ಆಗಿದೆ ಎಂದು ಸೂರ್ಯ ಸ್ಪಷ್ಟಪಡಿಸಿದ್ದರು.

ಅಭಿಷೇಕ್ ಶರ್ಮಾ ಮತ್ತೆ ಫೇಲ್
ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್ 8 ಹಂತದಲ್ಲಿ ಪಂದ್ಯದಲ್ಲೂ ಇಬ್ಬರೂ ಮಿಂಚಲು ವಿಫಲರಾದರು. ಈ ಮೂಲಕ ಸೂರ್ಯಕುಮಾರ್ ಯಾದವ್ ವಾದದಲ್ಲಿ ಹುರುಳಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ.
ತಿಲಕ್ ವರ್ಮಾ ಇಲ್ಲಿತನಕ ಗಳಿಸಿದ್ದು 106 ರನ್
ಕೊನೆಗೂ ಖಾತೆ ತೆರೆದ ಅಭಿಷೇಕ್ ಶರ್ಮಾ
ಅಭಿಷೇಕ್ ಬದಲು ಸಂಜು ಆಡಿಸಬೇಕಾ? ಎಂದ ಸೂರ್ಯ
ಅಭಿಷೇಕ್ ಬದಲು ಸಂಜುರನ್ನು ಆಡಿಸಬಹುದಲ್ಲವೇ ಎಂದು ಪತ್ರಕರ್ತರು ಕೇಳಿದಾಗ, ಸೂರ್ಯಕುಮಾರ್ ನಗುತ್ತಲೇ ಉತ್ತರಿಸಿದರು. 'ಅಭಿಷೇಕ್ ಬದಲು ಸಂಜು ಆಡಬೇಕಾ ನಿಮ್ಮ ಅಭಿಪ್ರಾಯ? ಅಥವಾ ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಬದಲು ಸಂಜು ಬರಬೇಕೆ?' ಎಂದು ಸೂರ್ಯ ಮರುಪ್ರಶ್ನೆ ಹಾಕಿದರು.
ವಿಶ್ವಕಪ್‌ಗೂ ಮುನ್ನ ಈ ಚಾಲೆಂಜ್ ನಿರೀಕ್ಷಿಸಿರಲಿಲ್ಲ
ಪವರ್‌ಪ್ಲೇನಲ್ಲಿ ತಂಡ 40-50 ರನ್ ಗಳಿಸಿ ಉತ್ತಮವಾಗಿಯೇ ಆಡುತ್ತಿದೆ. ಆದರೆ, ಎದುರಾಳಿಗಳು ಆಫ್ ಸ್ಪಿನ್ನರ್‌ಗಳನ್ನು ಬಳಸಿ ನಮ್ಮ ಟಾಪ್ 4 ಬ್ಯಾಟರ್‌ಗಳನ್ನು ಕಟ್ಟಿಹಾಕಲು ಯೋಚಿಸುತ್ತಿದ್ದಾರೆ. ವಿಶ್ವಕಪ್‌ಗೂ ಮುನ್ನ ಇಂತಹ ಸವಾಲನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ಸೂರ್ಯ ಹೇಳಿದರು.
ಕಳೆದ ಕೆಲವು ಪಂದ್ಯಗಳಲ್ಲಿ ವಿಫಲರಾಗಿದ್ದರೂ, ಯುವ ಆಟಗಾರ ಅಭಿಷೇಕ್ ಶರ್ಮಾರನ್ನು ಕೈಬಿಡಲು ಟೀಮ್ ಮ್ಯಾನೇಜ್‌ಮೆಂಟ್ ಸಿದ್ಧವಿಲ್ಲ ಎಂಬ ಸ್ಪಷ್ಟ ಸೂಚನೆಯನ್ನು ನಾಯಕ ನೀಡಿದರು. 'ನಾವು ಫಾರ್ಮ್ ಇಲ್ಲದಿದ್ದಾಗ ಕಳೆದ ಒಂದು ವರ್ಷ ನಮ್ಮನ್ನು ಕಾಪಾಡಿದ್ದು ಅಭಿಷೇಕ್. ಈಗ ಅವನು ಫಾರ್ಮ್ ಕಳೆದುಕೊಂಡಾಗ ಅವನನ್ನು ಬೆಂಬಲಿಸುವುದು ನಮ್ಮ ಕರ್ತವ್ಯ' ಎಂದು ಸೂರ್ಯಕುಮಾರ್ ಉತ್ತರಿಸಿದರು.
ಅಭಿಷೇಕ್ ಶರ್ಮಾ ಬೆನ್ನಿಗೆ ನಿಂತ ಸೂರ್ಯಕುಮಾರ್ ಯಾದವ್
'ನಮಗೆ ಯಾವುದೇ ಆತಂಕಗಳಿಲ್ಲ. ಅಭಿಷೇಕ್ ಫಾರ್ಮ್ ಬಗ್ಗೆ ಚಿಂತೆ ಮಾಡುವವರನ್ನು ನೆನೆದು ನನಗೆ ಬೇಸರವಾಗುತ್ತಿದೆ. ಅಭಿಷೇಕ್ ರನ್ ಗಳಿಸಿಲ್ಲ ಎಂಬುದು ನಿಜ. ಆದರೆ, ಅವನು ರನ್ ಗಳಿಸಲು ಶುರು ಮಾಡಿದರೆ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ' ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಕಳೆದ ಏಳು ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ಶರ್ಮಾ ಐದು ಬಾರಿ ಸೊನ್ನೆಗೆ ಔಟಾಗಿದ್ದಾರೆ. ಒಂದೇ ಕ್ಯಾಲೆಂಡರ್ ವರ್ಷದಲ್ಲಿ (ಅದೂ ಫೆಬ್ರವರಿ ತಿಂಗಳೊಳಗೆ) ಅತಿ ಹೆಚ್ಚು ಡಕೌಟ್ ಆದ ಭಾರತೀಯ ಆಟಗಾರ ಎಂಬ ಕೆಟ್ಟ ದಾಖಲೆ ಬರೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

