ಇತ್ತೀಚೆಗೆ ಧವನ್ ವಿಡಿಯೋವೊಂದನ್ನು ತಮ್ಮ ಫೇಸ್’ಬುಕ್ ಪೇಜ್’ನಲ್ಲಿ ಧವನ್ ಹಂಚಿಕೊಂಡಿದ್ದು, ತಮ್ಮ ಗುರುವಿನ ಜತೆ ಧವನ್ ಕೊಳಲನ್ನು ನುಡಿಸಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲೀಗ ವೈರಲ್ ಆಗುತ್ತಿದೆ.
ನವದೆಹಲಿ[ಜೂ.07]: ಸ್ಫೋಟಕ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ಅಭಿಮಾನಿಗಳನ್ನು ರಂಜಿಸುವ ಶಿಖರ್ ಧವನ್ ಅವರನ್ನು ನಾವು ನೋಡಿದ್ದೇವೆ. ಆದರೆ ಯಾವತ್ತಾದರೂ ಧವನ್ ಕೊಳಲು ಊದುವುದನ್ನು ನೋಡಿದ್ದೀರಾ..?
ಹೌದು, ಇತ್ತೀಚೆಗೆ ಧವನ್ ವಿಡಿಯೋವೊಂದನ್ನು ತಮ್ಮ ಫೇಸ್’ಬುಕ್ ಪೇಜ್’ನಲ್ಲಿ ಧವನ್ ಹಂಚಿಕೊಂಡಿದ್ದು, ತಮ್ಮ ಗುರುವಿನ ಜತೆ ಧವನ್ ಕೊಳಲನ್ನು ನುಡಿಸಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲೀಗ ವೈರಲ್ ಆಗುತ್ತಿದೆ.
’ಕೊಳಲ’ನ್ನು ತನ್ನ ಇಷ್ಟದ ಉಪಕರಣವೆಂದಿರುವ ಧವನ್, ಕಳೆದ ಮೂರು ವರ್ಷಗಳಿಂದ ತುಂಬಾ ಖುಷಿಯಿಂದ ಕಲಿಯುತ್ತಿರುವುದಾಗಿ ಹೇಳಿದ್ದಾರೆ. ಗುರು ವೇಣುಗೋಪಾಲ್ ಜಿ ಅವರ ಬಳಿ ಕಳೆದ ಮೂರು ವರ್ಷಗಳಿಂದ ಕೊಳಲು ನುಡಿಸುವುದನ್ನು ಕಲಿಯುತ್ತಿದ್ದೇನೆ. ಕೊಳಲು ನುಡಿಸುವ ವಿಚಾರದಲ್ಲಿ ನಾನು ಇನ್ನೂ ದೂರ ಕ್ರಮಿಸಬೇಕಿದೆ. ಆದರೆ ನಾನು ಆರಂಭಿಸಿರುವುದೇ ಖುಷಿಯ ಸಂಗತಿ ಎಂದಿದ್ದಾರೆ.
ಹೀಗಿತ್ತು ಶಿಖರ್ ಧವನ್ ಕೊಳಲು ವಾದನ:
ಧವನ್ ಕೊಳಲು ವಾದನದ ಬಗ್ಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು ಹೀಗೆ..
