ಬೆಂಗಳೂರು(ಜೂನ್.14): ಅಫ್ಘಾನಿಸ್ತಾನ ವಿರುದ್ಧಧ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ 107 ರನ್‌ಗೆ ಔಟಾಗಿದ್ದಾರೆ. ಮತ್ತೊರ್ವ ಆರಂಭಿಕ ಮುರಳಿ ವಿಜಯ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. 

ಯಮಿನ್ ಅಹಮ್ಮದ್ಜೈ ಬೌಲಿಂಗ್‌ನಲ್ಲಿ ಧವನ್, ಮೊಹಮ್ಮದ್ ನಬಿಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರರು. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಭಾರತ ತಂಡಕ್ಕೆ ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಭರ್ಜರಿ ಆರಂಭ ನೀಡಿದರು. ಬೌಂಡರಿ, ಸಿಕ್ಸರ್ ಮೂಲಕ  ಅಬ್ಬರಿಸಿದ ಧವನ್, 96 ಎಸೆತದಲ್ಲಿ 19 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 107 ರನ್ ಸಿಡಿಸಿದರು. ಈ ಮೂಲಕ ಭೋಜನ ವಿರಾಮಕ್ಕೂ ಮೊದಲು ಶತಕ ಸಿಡಿಸಿದ ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು.

 

 

ಮೊದಲ ವಿಕೆಟ್‌ಗೆ ಧವನ್ ಹಾಗೂ ಮುರಳಿ ವಿಜಯ್ 168 ರನ್ ಜೊತೆಯಾಟ ನೀಡಿದರು. ಧವನ್ ವಿಕೆಟ್ ಪತನದ ಬಳಿಕ ಮುರಳಿ ವಿಜಯ ಅರ್ಧಶತಕ ಸಿಡಿಸಿದರು. ಸದ್ಯ ವಿಜಯ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಎಚ್ಚರಿಕೆಯ ಆಟಕ್ಕೆ ಮುಂದಾಗಿದ್ದಾರೆ.

ಇಂಡೋ-ಆಫ್ಘಾನ್ ಟೆಸ್ಟ್: ಬೌಂಡರಿಗಳ ಸುರಿಮಳೆಯೊಂದಿಗೆ ಧವನ್ ಶತಕ