ಸಿಎಸ್’ಕೆ ಸವಾಲಿನ ಗುರಿ ನೀಡಿದ ಡೆಲ್ಲಿ ಡೇರ್’ಡೆವಿಲ್ಸ್

Shankar Patel Late Flourish Takes DD To 162 for 5 vs CSK
Highlights

ಕೊನೆಯಲ್ಲಿ ಆರನೇ ವಿಕೆಟ್’ಗೆ ಹರ್ಷಲ್ ಪಟೇಲ್ ಹಾಗೂ ವಿಜಯ್ ಶಂಕರ್ ಕೇವಲ 32 ಎಸೆತಗಳಲ್ಲಿ ಮುರಿಯದ 65 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ನವದೆಹಲಿ[ಮೇ.18]: ಹರ್ಷಲ್ ಪಟೇಲ್, ರಿಶಭ್ ಪಂತ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಡೇರ್’ಡೆವಿಲ್ಸ್ 162 ರನ್’ಗಳ ಸವಾಲಿನ ಮೊತ್ತ ಕಲೆಹಾಕಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಮಂದಗತಿಯ ಆರಂಭವನ್ನು ಪಡೆಯಿತು. ಮೊದಲ 4 ಓವರ್’ಗಳಲ್ಲಿ ಡೆಲ್ಲಿ ಕಲೆಹಾಕಿದ್ದು 6ರ ಸರಾಸರಿಯಂತೆ ಕೇವಲ 24 ರನ್ ಮಾತ್ರ. 5ನೇ ಓವರ್’ನಲ್ಲಿ ದಾಳಿಗಿಳಿದ ದೀಪಕ್ ಚಾಹರ್ ಡೆಲ್ಲಿ ಆರಂಭಿಕ ಪೃಥ್ವಿ ಶಾರನ್ನು ಬಲಿ ಪಡೆಯುವಲ್ಲಿ ಸಫಲವಾದರು. ಎರಡನೇ ವಿಕೆಟ್’ಗೆ ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಶಭ್ ಪಂತ್ 54 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಎನ್ಜಿಡಿ ಯಶಸ್ವಿಯದರು. 11ನೇ ಓವರ್’ನಲ್ಲಿ ಮಾರಕ ದಾಳಿ ನಡೆಸಿದ ಎನ್ಜಿಡಿ ಡೆಲ್ಲಿಯ ಸೆಟ್ ಬ್ಯಾಟ್ಸ್’ಮನ್’ಗಳಾದ ಅಯ್ಯರ್(19) ಹಾಗೂ ಪಂತ್(38) ಅವರನ್ನು ಒಂದೇ ಓವರ್’ನಲ್ಲಿ ಬಲಿ ಪಡೆಯುವ ಮೂಲಕ ಡೆಲ್ಲಿಗೆ ಶಾಕ್ ನೀಡಿದರು. 
ಕೊನೆಯಲ್ಲಿ ಆರನೇ ವಿಕೆಟ್’ಗೆ ಹರ್ಷಲ್ ಪಟೇಲ್ ಹಾಗೂ ವಿಜಯ್ ಶಂಕರ್ ಕೇವಲ 32 ಎಸೆತಗಳಲ್ಲಿ ಮುರಿಯದ 65 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಸಿಎಸ್’ಕೆ ಪರ ಎನ್ಜಿಡಿ 2 ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ ಹಾಗೂ ದೀಪಕ್ ಚಾಹರ್ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
DD: 162/5
ರಿಶಭ್ ಪಂತ್: 38
ಎನ್ಜಿಡಿ: 14/2
[*ವಿವರ ಅಪೂರ್ಣ]
 

loader