ಶೇನ್ ವಾಟ್ಸನ್ ತಮ್ಮ ಗೆಲುವಿನ ಗುಟ್ಟನ್ನು ಬಿಚ್ಚಿಟ್ಟಿದ್ದು ಹೀಗೆ...

Shane Watson credits Chennai Super Kings captain MS Dhoni for his return to form in IPL 2018
Highlights

36 ವರ್ಷದ ಶೇನ್ ವಾಟ್ಸನ್ ಚೆನ್ನೈ ಸೂಪರ್’ಕಿಂಗ್ಸ್ ಆಡಿದ 13 ಪಂದ್ಯಗಳಲ್ಲಿ 1 ಶತಕ ಹಾಗೂ 2 ಅರ್ಧಶತಕಗಳ ನೆರವಿನಿಂದ 438 ರನ್ ಬಾರಿಸಿದ್ದಾರೆ. ಅಲ್ಲದೇ ಬೌಲಿಂಗ್’ನಲ್ಲಿ 6 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 

ಚೆನ್ನೈ[ಮೇ.22]: ‘ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿಯಿಂದಾಗಿ ನಾನು ಐಪಿಎಲ್‌ನಲ್ಲಿ ಫಾರ್ಮ್‌ಗೆ ಮರಳಲು ಸಾಧ್ಯವಾಯಿತು’ ಎಂದು ತಂಡದ ಆಲ್‌ರೌಂಡರ್ ಶೇನ್ ವಾಟ್ಸನ್ ಹೇಳಿದ್ದಾರೆ.
‘ಸಿಎಸ್‌ಕೆಯಂತಹ ತಂಡಕ್ಕೆ ಆಯ್ಕೆಯಾಗಿದ್ದು ನನ್ನ ಅದೃಷ್ಟ. ಟೂರ್ನಿಯುದ್ದಕ್ಕೂ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ಸಿಕ್ಕಿತ್ತು. ಜತೆಗೆ ತಂಡಕ್ಕೆ ಅಗತ್ಯವಿದ್ದಾಗ ಬೌಲಿಂಗ್ ನಿರ್ವಹಿಸಲು ಕೂಡ ಧೋನಿ ನನಗೆ ಅವಕಾಶ ನೀಡಿದರು’ ಎಂದು ವಾಟ್ಸನ್ ಹೇಳಿದ್ದಾರೆ. 
‘ಧೋನಿ ಮೈದಾನದಲ್ಲಿ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುತ್ತಾರೆ, ಅವರ ತಂತ್ರಗಾರಿಕೆಯ ವಿಶೇಷತೆಗಳೇನು ಎನ್ನುವುದನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದೆ’ ಎಂದಿರುವ ವಾಟ್ಸನ್, ಧೋನಿಯ ನಾಯಕತ್ವ ಗುಣಗಳನ್ನು ಕೊಂಡಾಡಿದ್ದಾರೆ. 
36 ವರ್ಷದ ಶೇನ್ ವಾಟ್ಸನ್ ಚೆನ್ನೈ ಸೂಪರ್’ಕಿಂಗ್ಸ್ ಆಡಿದ 13 ಪಂದ್ಯಗಳಲ್ಲಿ 1 ಶತಕ ಹಾಗೂ 2 ಅರ್ಧಶತಕಗಳ ನೆರವಿನಿಂದ 438 ರನ್ ಬಾರಿಸಿದ್ದಾರೆ. ಅಲ್ಲದೇ ಬೌಲಿಂಗ್’ನಲ್ಲಿ 6 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 

loader