ಪುಣೆ(ಏ.20): ಹಿರಿಯ ಆಟಗಾರ ಶೇನ್ ವ್ಯಾಟ್ಸ್'ನ್ ಭರ್ಜರಿ  ಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 205 ರನ್'ಗಳ ಬೃಹತ್ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದ ರಾಜಸ್ಥಾನ್ ತಂಡ ಧೋನಿ ಪಡೆಯನ್ನು ಬ್ಯಾಟಿಂಗ್ ಆಹ್ವಾನಿಸಿತು.  ಆರಂಭಿಕ ಆಟಗಾರ ಅಂಬಾಟಿ ರಾಯುಡು  ಬೇಗನೆ ಔಟಾದರೂ ವ್ಯಾಟ್ಸನ್ ಹಾಗೂ ಸುರೇಶ್ ರೈನಾ(46: 9 ಬೌಂಡರಿ) ಜೋಡಿ 11.5 ಓವರ್'ಗಳಲ್ಲಿ 2ನೇ ವಿಕೇಟ್ ನಷ್ಟಕ್ಕೆ 131 ರನ್ ಪೇರಿಸಿದರು. ರೈನಾ ಕನ್ನಡಿಗ ಶ್ರೇಯಸ್ ಗೋಪಾಲ್'ಗೆ ಔಟಾದ ನಂತರ ಧೋನಿ, ಹಾಗು ಬಿಲ್ಲಿಂಗ್ಸ್ ಕೂಡ ಗೋಪಾಲ್'ಗೆ ವಿಕೇಟ್ ಒಪ್ಪಿಸಿದರು.

ಕೊನೆಯ 5 ಓವರ್ ಇದ್ದಾಗ ಆಗಮಿಸಿದ ಬ್ರಾವೋ (24 ) ವ್ಯಾಟ್ಸ್'ನ್'ಗೆ 5ನೇ ವಿಕೇಟ್'ಗೆ ಉತ್ತಮ ಜೊತೆಯಾಟ ನೀಡಿದರು. ವ್ಯಾಟ್ಸ್'ನ್ ಅಜೇಯ 106 ರನ್'ಗಳಲ್ಲಿ 9 ಬೌಂಡರಿ ಹಾಗೂ 6 ಸಿಕ್ಸ್'ರ್'ಗಳಿದ್ದವು. ರಾಜಸ್ಥಾನ್ ಪರ ಶ್ರೇಯಸ್ ಗೋಪಾಲ್ 20/3 ವಿಕೇಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

 

ಸ್ಕೋರ್

ಚೆನ್ನೈ ಸೂಪರ್ ಕಿಂಗ್ಸ್ 20 ಓವರ್'ಗಳಲ್ಲಿ 204/5

(ವ್ಯಾಟ್ಸ್'ನ್ 106 ಅಜೇಯ, ರೈನಾ 46, ಶ್ರೇಯಸ್ ಗೋಪಾಲ್ 20/3)

 

(ಚೆನ್ನೈ ವಿರುದ್ಧದ ಪಂದ್ಯ)

ವಿವರ ಅಪೂರ್ಣ