ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ತಮೀಮ್(84), ಶಕೀಬ್(67) ಹಾಗೂ ಮುಷ್ಫಿಕರ್ ರಹೀರ್‌(62)ರ ಅರ್ಧಶತಕದ ನೆರವಿನಿಂದ 320 ರನ್ ಪೇರಿಸಿತು.

ಢಾಕಾ(ಜ.19): ಶಕೀಬ್ ಅಲ್ ಹಸನ್‌ ಹಾಗೂ ತಮೀಮ್ ಇಕ್ಬಾಲ್ ಆಕರ್ಷಕ ಆಟದ ನೆರವಿನಿಂದ ತ್ರಿಕೋನ ಏಕದಿನ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ 163 ರನ್‌'ಗಳ ಸ್ಮರಣೀಯ ಜಯ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ತಮೀಮ್(84), ಶಕೀಬ್(67) ಹಾಗೂ ಮುಷ್ಫಿಕರ್ ರಹೀರ್‌(62)ರ ಅರ್ಧಶತಕದ ನೆರವಿನಿಂದ 320 ರನ್ ಪೇರಿಸಿತು.

ಸವಾಲಿನ ಮೊತ್ತ ಬೆನ್ನತ್ತಿದ ಲಂಕಾ ಕೇವಲ 157 ರನ್'ಗಳಿಗೆ ಸರ್ವಪತನ ಕಂಡಿತು. ಲಂಕಾದ ಯಾವೊಬ್ಬ ಬ್ಯಾಟ್ಸ್'ಮನ್ ಕೂಡಾ ವೈಯುಕ್ತಿಕ 30 ರನ್ ಗಡಿ ದಾಟಲೂ ಸಫಲವಾಗಲಿಲ್ಲ. ತಿಸಾರ ಪೆರೇರಾ(29) ಲಂಕಾ ಪರ ಬಾರಿಸಿದ ವೈಯುಕ್ತಿಕ ಗರಿಷ್ಠ ಮೊತ್ತವೆನಿಸಿತು. ಲಂಕಾದ ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ಶಕೀಬ್ ಆಘಾತ ನೀಡಿದರು. ನಾಯಕ ಮೊರ್ತಾಜಾ ಹಾಗೂ ಹುಸೇನ್ ತಲಾ 2 ವಿಕೆಟ್ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್:

ಬಾಂಗ್ಲಾ 320/7 (ತಮೀಮ್ 84, ಶಕೀಬ್ 67)

ಲಂಕಾ 157/10 (ಪೆರೇರಾ 29, ಶಕೀಬ್ 47/3)