Asianet Suvarna News Asianet Suvarna News

ಕ್ರೀಡಾಸ್ಫೂರ್ತಿ ಮರೆತ ಶಕೀಬ್, ನುರುಲ್'ಗೆ ಐಸಿಸಿ ಶಾಕ್..!

ಅಂತಿಮ ಓವರ್'ನಲ್ಲಿ ಇಸ್ರೂ ಉಡಾನ್ ಎರಡು ಬೌನ್ಸರ್ ಎಸೆದಿದ್ದರು. ಎರಡನೇ ಬೌನ್ಸರ್ ಅನ್ನು ಅಂಪೈರ್ ನೋಬಾಲ್ ನೀಡಿಲ್ಲವೆಂದು ಮುಷ್ತಾಫಿಜುರ್ ಅವರನ್ನು ವಾಪಾಸ್ ಬರುವಂತೆ ಕರೆದಿದ್ದರು. ಶಕೀಬ್ ಈ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

Shakib Nurul fined for breaching code of conduct

ಕೊಲಂಬೊ(ಮಾ.17): ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವೆ ಶುಕ್ರವಾರ ನಡೆದ ಟಿ20 ಪಂದ್ಯದ ಕೊನೆಯ ಓವರ್ ಸಾಕಷ್ಟು ಹೈಡ್ರಾಮಕ್ಕೆ ಸಾಕ್ಷಿಯಾಗಿದ್ದು, ಈ ವೇಳೆ ಅನುಚಿತ ವರ್ತನೆ ತೋರಿದ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಹಾಗೂ ಕಾಯ್ದಿರಿಸಿದ ಆಟಗಾರ ನುರುಲ್ ಹಸನ್‌ ಅವರಿಗೆ ಐಸಿಸಿ ಪಂದ್ಯದ ಸಂಭಾವನೆಯ ಶೇ.25% ದಂಡ ಹಾಗೂ ಒಂದು ಋಣಾತ್ಮಕ ಅಂಕ ನೀಡಿದೆ.

ಅಂತಿಮ ಓವರ್'ನಲ್ಲಿ ಇಸ್ರೂ ಉಡಾನ್ ಎರಡು ಬೌನ್ಸರ್ ಎಸೆದಿದ್ದರು. ಎರಡನೇ ಬೌನ್ಸರ್ ಅನ್ನು ಅಂಪೈರ್ ನೋಬಾಲ್ ನೀಡಿಲ್ಲವೆಂದು ಮುಷ್ತಾಫಿಜುರ್ ಅವರನ್ನು ವಾಪಾಸ್ ಬರುವಂತೆ ಕರೆದಿದ್ದರು. ಶಕೀಬ್ ಈ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.Shakib Nurul fined for breaching code of conduct

ಮತ್ತೊಂದು ಪ್ರಕರಣದಲ್ಲಿ ಲಂಕಾ ನಾಯಕ ತಿಸಾರಾ ಪೆರೇರಾ ಅವರತ್ತ ಬೆರಳು ಮಾಡಿ, ಅವರ ಜತೆ ವಾಗ್ವಾದ ನಡೆಸಿದ ಬಾಂಗ್ಲಾ ಹೆಚ್ಚುವರಿ ಆಟಗಾರ ನುರುಲ್ ಹಸನ್‌'ಗೂ ಐಸಿಸಿ ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ ಹಾಗೂ 1 ಋಣಾತ್ಮಕ ಅಂಶ ಹೇರಿದೆ.

ಶಕೀಬ್ ಹಾಗೂ ನುರುಲ್ ಇಬ್ಬರು ಕೆಟ್ಟ ವರ್ತನೆ ತೋರಿದರು, ಹಾಗೂ ಇಂತಹ ತಪ್ಪುಗಳನ್ನು ಒಪ್ಪಲೂ ಸಾಧ್ಯವಿಲ್ಲ ಎಂದು ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ.

Follow Us:
Download App:
  • android
  • ios