ಕ್ರಿಕೆಟ್‌ನಲ್ಲಿ ಪ್ರತಿ ದಿನ ದಾಖಲೆಗಳು ನಿರ್ಮಾಣ ಆಗುತ್ತಲೇ ಇರುತ್ತವೆ. ಪ್ರಥಮ ದರ್ಜೆ ಪಂದ್ಯವೊಂದು ಹೊಸ ದಾಖಲೆ ಬರೆದಿದೆ.
ಓಮನ್[ಫೆ.18] ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೊಸದೊಂದು ಇತಿಹಾಸ ನಿರ್ಮಾಣವಾಗಿದೆ. 50 ಓವರ್‌ನ ಪಂದ್ಯ 3.2 ಓವರ್‌ನಲ್ಲಿ ಮುಕ್ತಾಯವಾಗಿದೆ. ಸ್ಕಾಟ್ಲೆಂಡ್ ತಂಡ ಬರೋಬ್ಬರಿ 10 ವಿಕೆಟ್‌ಗಳ ಜಯ ಸಂಪಾದಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಓಮನ್ ತಂಡ 17.1 ಓವರ್ ನಲ್ಲಿ ಕೇವಲ 24 ರನ್ ಗಳಿಗೆ ಸರ್ವಪತನ ಕಂಡಿತು. 25 ರನ್ ಗಳ ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್ 3.2 ಓವರ್ ನಲ್ಲಿ 26 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ವಿಶ್ವಕಪ್‌ನಲ್ಲಿ ಮಹೇಂದ್ರ ಸಿಂಗ್ ಧೋನಿಗೆ 4ನೇ ಕ್ರಮಾಂಕ, ಕಾರಣ?
ಓಮನ್ ಪರ ಐವರು ಬ್ಯಾಟ್ಸ್ ಮನ್ ಗಳು ಶೂನ್ಯಕ್ಕೆ ಔಟಾಗಿದರು. ಸ್ಕಾಟ್ಲೆಂಡ್ ಪರ ರುಯ್ ಡ್ರಿ ಸ್ಮಿತ್ ಮತ್ತು ಅಡ್ರಿಯಾನ್ ನೈಲ್ ತಲಾ 4 ವಿಕೆಟ್ ಪಡೆದು ಮಿಂಚಿದರು. ಓಮನ್ ಗಳಿಸಿದ್ದು ಕೇವಲ 24 ರನ್ ಆದರೆ ಓಮನ್ ಬ್ಯಾಟ್ಸಮನ್ ಖವಾರ್ ಅಲಿ ಒಬ್ಬರೆ 15 ರನ್ ದಾಖಲಿಸಿದ್ದರು!
