ಸಾನಿಯಾ ಮಿರ್ಜಾ ತಂಗಿ ಜೊತೆ ಅಜರುದ್ದೀನ್ ಮಗನ ಮದುವೆ?
ಸಾನಿಯಾ ಮಿರ್ಜಾ ತಂಗಿ ಅನಮ್ ಮಿರ್ಜಾ ಹಾಗೂ ಮೊಹಮ್ಮದ್ ಅಜರುದ್ದೀನ್ ಮಗ ಅಸಾದ್ ಮದುವೆಗ್ತಾರಾ? ಅಸಾದ್ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್ ಈ ಮಾಹಿತಿ ಬಹಿರಂಗ ಪಡಿಸಿದೆ. ಇಲ್ಲಿದೆ ಹೆಚ್ಚಿನ ವಿವರ.
ಹೈದರಾಬಾದ್(ಮಾ.09): ಟೆನಿಸ್ ತಾರೆ ಸಾನಿಯಾ ಮಿರ್ಜಾ ತಂಗಿ ಅನಮ್ ಮಿರ್ಜಾ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮಗ ಅಸಾದ್ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ ಅನ್ನೋದು ಬಹಿರಂಗವಾಗಿದೆ ಶೀಘ್ರದಲ್ಲೇ ಇವರಿಬ್ಬರು ಮದುವೆಯಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.
ಇದನ್ನೂ ಓದಿ: ಧೋನಿ ಮಾಸ್ಟರ್ ಕ್ಲಾಸ್ ರನೌಟ್‌ಗೆ ಟ್ವಿಟರಿಗರ ಮೆಚ್ಚುಗೆ!
ಅನಮ್ ಮಿರ್ಜಾ ಹುಟ್ಟು ಹಬ್ಬದ ದಿನ ಅಸಾದ್ ಪೋಸ್ಟ್ ಈ ಸೀಕ್ರೆಟ್ ಬಹಿರಂಗ ಮಾಡಿದೆ. ನನ್ನ ಜೀವನದ ವಿಶೇಷ ವ್ಯಕ್ತಿ. ಹುಟ್ಟು ಹಬ್ಬದ ಶುಭಾಶಯಗಳು ಎಂದು ಅಸಾದ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಮದುವೆಯಾಗುತ್ತಿದ್ದಾರೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ.
ಇದನ್ನೂ ಓದಿ: ಐಪಿಎಲ್ 2019: ನಗಿಸಲು ಬರ್ತಿದ್ದಾರೆ RCB ತಂಡದ Mr.ನ್ಯಾಗ್ಸ್!
ಸಾನಿಯಾ ತಂಗಿ ಅನಮ್ ಮಿರ್ಜಾ ನವೆಂಬರ್ 18, 2016ರಲ್ಲಿ ಅಕ್ಬರ್ ರಶೀದ್ ಜೊತೆ ವಿವಾಹವಾಗಿದ್ದಾರೆ. ಹೈದರಾಬಾದ್ ಮೂಲದ ಉದ್ಯಮಿ ಅಕ್ಬರ್ ಜೊತೆಗಿನ ದಾಂಪತ್ಯ ಜೀವನ 2 ವರ್ಷದಲ್ಲಿ ಮುರಿದು ಬಿತ್ತು. ಬಳಿಕ ಅಜರ್ ಮಗ ಅಸಾದ್ ಜೊತೆ ಡೇಟಿಂಗ್ ಶುರು ಮಾಡಿದ್ದಾರೆ. ಇದೀಗ ಇವರ ಪ್ರೀತಿ ಮದುವೆಯ ಅರ್ಥ ಪಡೆದುಕೊಳ್ಳುತ್ತಿದೆ ಎಂದು ಹೇಳಲಾಗ್ತಿದೆ. ಆದರೆ ಈ ಕುರಿತು ಅಸಾದ್ ಅಥವಾ ಅನಮ್ ಮಿರ್ಜಾ ಯಾವುದೇ ಹೇಳಿಕೆ ನೀಡಿಲ್ಲ.