ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಎಂ.ಎಸ್.ಧೋನಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಲಿಲ್ಲ. ಇದು ತವರಿನ ಅಭಿಮಾನಿಗಳಿಗೆ ನಿರಾಸೆ ತಂದಿತ್ತು. ಆದರೆ ಧೋನಿ ಮಾಡಿದ ರನೌಟ್‌ಗೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ರಾಂಚಿ(ಮಾ.09): ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ಆದರೆ ತವರಿನಲ್ಲಿ ಧೋನಿ ಅದ್ಬುತ ರನೌಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ರನೌಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಅಂತಿಮ 2 ಏಕದಿನ ಪಂದ್ಯಕ್ಕೆ ಬದಲಾವಣೆ - ಧೋನಿಗೆ ವಿಶ್ರಾಂತಿ!
ಆಸ್ಟ್ರೇಲಿಯಾ ಬ್ಯಾಟಿಂಗ್ ವೇಳೆ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರ ಮುಂದುವರಿದಿತ್ತು. 41.5ನೇ ಓವರ್‌ನಲ್ಲಿ ಶಾನ್ ಮಾರ್ಶ್ ಸಿಂಗಲ್ ರನ್‌ಗಾಗಿ ಓಡಿದರು. ಕವರ್‌ನಲ್ಲಿದ್ದ ರವೀಂದ್ರ ಜಡೇಜಾ ಕ್ಷಣಮಾತ್ರದಲ್ಲೇ ಧೋನಿಯತ್ತ ಬಾಲ್ ಎಸೆದರು. ಬಾಲ್ ಹಿಡಿದು ರನೌಟ್ ಮಾಡುವಷ್ಟು ಸಮಯ ಇರಲಿಲ್ಲ. ಹೀಗಾಗಿ ಧೋನಿ ಬರುತ್ತಿದ್ದ ಬಾಲನ್ನು ಹಾಗೇ ಸ್ಟಂಪ್‌ನತ್ತ ತಿರುಗಿಸಿ ಮ್ಯಾಕ್ಸ್‌ವೆಲ್ ರನೌಟ್ ಮಾಡಿದರು.
ಇದನ್ನೂ ಓದಿ: ಪಂದ್ಯ ಸೋತರೂ ABD ದಾಖಲೆ ಮುರಿದ ವಿರಾಟ್ ಕೊಹ್ಲಿ!
ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 313 ರನ್ ಸಿಡಿಸಿತು. ಬೃಹತ್ ಗುರಿ ಬೆನ್ನಟ್ಟಿದ ಭಾರತ 281ರನ್‌ಗೆ ಆಲೌಟ್ ಆಗೋ ಮೂಲಕ ಸೋಲೊಪ್ಪಿಕೊಂಡಿತು. ತವರಿನಲ್ಲಿ ಧೋನಿ 26 ರನ್ ಸಿಡಿಸಿ ನಿರಾಸೆ ಮೂಡಿಸಿದರು.
