ಮಲ್ಲಿಕ್ ಮದ್ವೆಯಾಗಿರೋದು ಇಂಡೋ-ಪಾಕ್ ಒಗ್ಗೂಡಿಸಲು ಅಲ್ಲ- ಸಾನಿಯಾ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Aug 2018, 4:43 PM IST
Sania mirza slams India Pakistan citizenship question
Highlights

ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲ್ಲಿಕ್ ಮದುವೆಯಾದ ಸಂದರ್ಭದಿಂದ ಭಾರತದ ಟೆನಿಸ್ ಟಾರೆ ಸಾನಿಯಾ ಮಿರ್ಜಾ ಹಲವು ವಿವಾದಗಳನ್ನ ಎದುರಿಸಿದ್ದಾರೆ. ಇದೀಗ ಮಗುವಿನ ನಿರೀಕ್ಷೆಯಲ್ಲಿರುವ ಸಾನಿಯಾ ವಿವಾದಾತ್ಮಕ ಪ್ರಶ್ನೆಗಳಿಗೆ ತಿರುಗೇಟು ನೀಡಿದ್ದಾರೆ.

ಹೈದಾರಬಾದ್(ಆ.12): ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪತಿ, ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲ್ಲಿಕ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 2010ರಲ್ಲಿ ಸಾನಿಯಾ ಮಿರ್ಜಾ, ಪಾಕ್ ಕ್ರಿಕೆಟಿಗನನ್ನ ವರಿಸಿದಾಗ ವಿವಾದ ಎದ್ದಿತ್ತು. ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವಾಗಲು ಮತ್ತೊಮ್ಮೆ ಇಂಡೋ-ಪಾಕ್ ಕುರಿತ ಪ್ರಶ್ನೆಗಳು ಸಾನಿಯಾ ಎದುರಿಸಬೇಕಾಗಿದೆ.

ಸಾನಿಯಾ ಹಾಗೂ ಮಲ್ಲಿಕ್ ದಂಪತಿಗೆ ಹುಟ್ಟೋ ಮಗು ಭಾರತೀಯ ಪ್ರಜೆಯೋ ಅಥವಾ ಪಾಕಿಸ್ತಾನಿ ಪ್ರಜೆಯೋ ಅನ್ನೋ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸಾನಿಯಾ, ಇಲ್ಲ ಸಲ್ಲದ ಮಾತುಗಳಿಂದ ದೂರವಿರೋದಾಗಿ ಸಾನಿಯಾ ಹೇಳಿದ್ದಾರೆ.

ಇದನ್ನೂ ಓದಿ: ಗರ್ಭಿಣಿಯಾದರೂ ಟೆನಿಸ್ ಬಿಡದ ಸಾನಿಯಾ ಮಿರ್ಜಾ

ಖಾಸಗಿ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಸಾನಿಯಾ, ವಿವಾದಾತ್ಮಕ ಪ್ರಶ್ನೆಗಳಿಗೆ ತಿರುಗೇಟು ನೀಡಿದ್ದಾರೆ. ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲ್ಲಿಕ್‌ನನ್ನ ಮದುವೆಯಾಗಿರೋದು ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಉತ್ತಮ ಪಡಿಸಬೇಕೆಂದೆಲ್ಲ. ಆದರೆ ನಾನು ಪಾಕಿಸ್ತಾನಕ್ಕೆ ತೆರಳಿದಾಗ ಅಲ್ಲಿನ ಜನರು ತೋರುವ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದಿದ್ದಾರೆ.

ನಮ್ಮಿಬ್ಬರಿಂದ ಎರಡುದೇಶದ ಸಂಬಂಧ ಉತ್ತಮವಾಗಲಿದೆ ಅನ್ನೋ ಅತೀಯಾದ ವಿಶ್ವಾಸ ನನಗಿಲ್ಲ  . ಆದರೆ ನಮಗಿಬ್ಬರಿಗೂ ವೈಯುಕ್ತಿಕ ಬದುಕಿದೆ ಅನ್ನೋದನ್ನ ಎಲ್ಲರು ಅರ್ಥಮಾಡಿಕೊಳ್ಳಬೇಕು ಎಂದು ಸಾನಿಯಾ ಸೂಚಿಸಿದ್ದಾರೆ.
 

loader