ಕಿರುತೆರೆಯಲ್ಲಿ ಮೊದಲ ಸಲ ಲಿಪ್ ಟು ಲಿಪ್; ಡೆಟಾಲ್‌ನಿಂದ ಬಾಯಿ ತೊಳೆದುಕೊಂಡ ನಟಿ!
ಅಬ್ಬಬ್ಬಾ!! ಕಿರುತೆರೆಯಲ್ಲಿ ಮೊಟ್ಟ ಮೊದಲು ಲಿಪ್ ಲಾಕ್ ಮಾಡಿದ ನಟಿ ಇವರೇ.... ಯಾವ ನಟನ ಜೊತೆ ಗೊತ್ತಾ?

ಇತ್ತೀಚಿನ ಸಂದರ್ಶನವೊಂದರಲ್ಲಿ ನೀನಾ, ನಾನು ನಟನೆಯಲ್ಲಿ ಮುತ್ತು ಕೊಟ್ಟ ಮೊದಲ ನಟಿ ಎಂದು ಹೇಳಿಕೊಂಡರು. ಚಿತ್ರೀಕರಣದ ಹಿಂದಿನ ರಾತ್ರಿ ನಿದ್ದೆಯಿಲ್ಲದೆ ಕಳೆದಿದ್ದಾಗಿ ತಿಳಿಸಿದರು.
ನೀನಾ ಗುಪ್ತಾ ಅವರು ಜೀ ಟಿವಿಯ ದಿಲ್ಲಗಿಯಲ್ಲಿ ಸಹ-ನಟ ದಿಲೀಪ್ ಧವನ್ ಅವರೊಂದಿಗೆ ಚುಂಬನದ ದೃಶ್ಯವನ್ನು ಚಿತ್ರೀಕರಿಸಿದ ಸಂದರ್ಭವನ್ನು ನೆನಪಿಸಿಕೊಂಡರು.
ಪ್ರೀತಿಸದ ಯಾರನ್ನಾದರೂ ಚುಂಬಿಸುವುದು ಕೆಟ್ಟ ಅನುಭವವಾಗಿದೆ.ಇದು ಭಾರತೀಯ ಟಿವಿಯಲ್ಲಿ ಮೊಟ್ಟಮೊದಲ ಲಿಪ್-ಟು-ಲಿಪ್ ಚುಂಬನದ ದೃಶ್ಯವನ್ನು ಹೊಂದಿತ್ತು.
ನಾನು ಹೇಗೆ ಚುಂಬಿಸುತ್ತೇನೆ ಎಂದು ಯೋಚಿಸುತ್ತಾ ರಾತ್ರಿಯಿಡೀ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ.ನಾವಿಬ್ಬರು ಸ್ನೇಹಿತರಾಗಿದ್ದೆವು. ಆದರೂ ನನಗೆ ಚುಂಬಿಸುವುದು ಅಷ್ಟು ಸುಲಭವಾಗಿರಲ್ಲಿಲ್ಲ.
ಏಕೆಂದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ನಾನು ಸಿದ್ಧವಾಗಿರಲ್ಲಿಲ್ಲ. ನಾನು ತುಂಬಾ ಉದ್ವಿಗ್ನವಾಗಿದ್ದೆ. ಆದರೂ ಅದನ್ನು ಮಾಡಬೇಕೆಂದು ನನಗೆ ಅರ್ಥವಾಯಿತು ಎಂದು ನೀತಾ ಬಾಲಿವುಡ್ ಬಬಲ್‌ನಲ್ಲಿ ಹೇಳಿದ್ದರು.
ಕಿಸ್ಸಿಂಗ್ ಸೀನ್ ಮುಗಿದ ತಕ್ಷಣ ನಾನು ಡೆಟಾಲ್‌ನಿಂದ ನನ್ನ ಬಾಯಿಯನ್ನು ತೊಳೆದುಕೊಂಡೆ. ನನಗೆ ಗೊತ್ತಿಲ್ಲದ, ನಾನು ಪ್ರೀತಿಸದ ಯಾರನ್ನಾದರೂ ಚುಂಬಿಸುವುದು ನನಗೆ ತುಂಬಾ ಕಷ್ಟಕರವಾಗಿತ್ತು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.