ಗರ್ಭಿಣಿಯಾದರೂ ಟೆನಿಸ್ ಬಿಡದ ಸಾನಿಯಾ ಮಿರ್ಜಾ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Aug 2018, 7:05 PM IST
seven month pregnant Sania mirza playing tennis
Highlights

ಗರ್ಭಿಣಿಯಾಗಿರುವ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸ್ಪರ್ಧಾತ್ಮಕ ಟೆನಿಸ್‌ನಿಂದ ದೂರ ಉಳಿದಿದ್ದಾರೆ. ಹಾಗಂತ ಟೆನಿಸ್‌ನಿಂದ ದೂರ ಇಲ್ಲ. ಗರ್ಭಿಣಿಯಾದರು ಸಾನಿಯಾ ಟೆನಿಸ್ ಆಡುತ್ತಿದ್ದಾರೆ. ಇದೀಗ ಸಾನಿಯಾ ವೀಡಿಯೋ ವೈರಲ್ ಆಗಿದೆ.

ಹೈದರಾಬಾದ್(ಆ.09): ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ಹಾಗಂತ ತುಂಬು ಗರ್ಭಿಣಿ ಸಾನಿಯಾ ಟೆನಿಸ್‌ನಿಂದ ದೂರ ಉಳಿದಿಲ್ಲ. ಗರ್ಭಿಣಿಯಾದರೂ ಸಾನಿಯಾ ಟೆನಿಸ್ ಆಡೋ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಟೆನಿಸ್ ವೀಡಿಯೋ ಅಪ್‌ಲೋಡ್ ಮಾಡಿರುವ ಸಾನಿಯಾ, ಟೆನಿಸ್‌ನಿಂದ ದೂರ ಇರಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ. ಸಾನಿಯಾ ಧರ್ಯಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

 

 

ಸಾನಿಯಾ ಮಿರ್ಜಾ ಹಾಗೂ ಪತಿ ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲ್ಲಿಕ್ ಅಕ್ಟೋಬರ್‌ನಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ.  ಟೆನಿಸ್ ಆಡೋ ವೀಡಿಯೋ ಮುನ್ನ, ಕೋರ್ಟ್‌ನಲ್ಲಿ ಫೋಟೋಗೆ ಫೋಸ್ ನೀಡಿದ್ದರು. ಇಷ್ಟೇ ಅಲ್ಲ, ಟೆನಿಸ್ ಪಟುವಿನಿಂದ ಟೆನಿಸ್ ದೂರ ಮಾಡಲು ಸಾಧ್ಯವಿಲ್ಲ ಎಂದು ಬರೆದಿದ್ದರು.

 

 

loader