ಭಾರತದ ಅಗ್ರ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಮುದ್ದಾದ ಮಗು ಇಝಾನ್ ಮಿರ್ಜಾ ಮಲಿಕ್ ಜತೆಗಿನ ಕಪ್ಪು-ಬಿಳುಪು ಫೋಟೋವೊಂದನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ ಹಂಚಿಕೊಂಡಿದ್ದಾರೆ. ಈ ಭಾವಚಿತ್ರ ಟ್ವಿಟರಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಭಾರತದ ಮಾಜಿ ನಂ.1 ಟೆನಿಸ್ ಆಟಗಾರ್ತಿ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿದ್ದರು. ಈ ತಾರಾ ದಂಪತಿಗೆ ಕಳೆದ ವರ್ಷದ ಅಕ್ಟೋಬರ್’ನಲ್ಲಿ ಗಂಡು ಮಗು ಜನಿಸಿತ್ತು. ಮಗುವಿಗೆ ಇಝಾನ್ ಎಂದು ಹೆಸರಿಟ್ಟಿದ್ದಾರೆ.

ಸಾನಿಯಾ ಮಿರ್ಜಾ ತಂಗಿ ಜೊತೆ ಅಜರುದ್ದೀನ್ ಮಗನ ಮದುವೆ?

6 ಬಾರಿ ಟೆನಿಸ್ ಗ್ರ್ಯಾಂಡ್’ಸ್ಲಾಂ ವಿಜೇತೆ ಸಾನಿಯಾ ಮಿರ್ಜಾ 2010ರಲ್ಲಿ ಶೋಯೆಬ್ ಮಲಿಕ್ ಅವರನ್ನು ವಿವಾಹ ಮಾಡಿಕೊಂಡಿದ್ದರು. 2018ರ ಏಪ್ರಿಲ್ 23ರಂದು ಸಾನಿಯಾ ತಾವು ಗರ್ಭಿಣಿಯಾಗಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದರು. ಪ್ರಸ್ತುತ ಸಾನಿಯಾ ಮಿರ್ಜಾ ತೆಲಂಗಾಣ ರಾಜ್ಯದ ರಾಯಭಾರಿ[ಬ್ರ್ಯಾಂಡ್ ಅಂಬಾಸಿಡರ್]ಯಾಗಿದ್ದಾರೆ.

ಮಗುವಿನ ಮೊದಲ ಫೋಟೋ ಬಹಿರಂಗ ಪಡಿಸಿದ ಸಾನಿಯಾ ಮಿರ್ಜಾ