ಮಗುವಿನ ಮೊದಲ ಫೋಟೋ ಬಹಿರಂಗ ಪಡಿಸಿದ ಸಾನಿಯಾ ಮಿರ್ಜಾ
ಸರಿಸುಮಾರು 2 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪುತ್ರನ ಫೋಟೋ ರಿವೀಲ್ ಮಾಡಿದ್ದಾರೆ. ಅಕ್ಟೋಬರ್ 30 ರಂದು ಸಾನಿಯಾ ಮಿರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಹೈದರಾಬಾದ್(ಡಿ.22): ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪತಿ, ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ದಂಪತಿಗೆ ಅಕ್ಟೋಬರ್ 30 ಸ್ಮರಣೀಯ ದಿನ. ಇದೇ ದಿನ ಸಾನಿಯಾ ಮಿರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸಾನಿಯಾ ಹಾಗೂ ಪುತ್ರ ಇಜಾನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಆದರೆ ಇದೇ ಮೊದಲ ಬಾರಿಗೆ ಪುತ್ರನ ಮುಖದ ಫೋಟೋ ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: ಸಾನಿಯಾ ಮಗು ಟೆನಿಸ್ ಪಟು ಅಥ್ವಾ ಕ್ರಿಕೆಟರ್- ಶೋಯೆಬ್ ಉತ್ತರವೇನು?
ಸಾನಿಯಾ ಮಿರ್ದಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪುತ್ರನ ಫೋಟೋ ಪೋಸ್ಟ್ ಮಾಡಿದ್ದಾರೆ. ಇಷ್ಟು ದಿನ ಕುಟುಂಬದ ಒತ್ತಾಯಕ್ಕೆ ಪುತ್ರನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರಲಿಲ್ಲ ಎಂದು ಸಾನಿಯಾ ಹೇಳಿದ್ದಾರೆ. ಇದೀಗ ಮೊದಲ ಬಾರಿಗೆ ಸಾನಿಯಾ ಮಗುವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
ಇದನ್ನೂ ಓದಿ:2019ರಲ್ಲಿ ಟೆನಿಸ್’ಗೆ ಮರಳುವ ವಿಶ್ವಾಸದಲ್ಲಿ ಸಾನಿಯಾ
ತಾಯ್ತನದಿಂದ ಟೆನಿಸ್‌ನಿಂದ ದೂರ ಉಳಿದಿರುವ ಸಾನಿಯಾ ಮಿರ್ಜಾ 2019ರಲ್ಲಿ ಟೆನಿಸ್‌ಗೆ ಮರಳೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೆನಿಸ್ ಆಟವನ್ನು ಆಡದೆ ಇರುವುದರಿಂದ ಏನನ್ನು ಕಳೆದುಕೊಂಡಿದ್ದೇನೆ ಎನಿಸುತ್ತಿದೆ ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ. ಮುಂದಿನ ವರ್ಷ ಟೆನಿಸ್‌ಗೆ ಮರಳುವ ಯೋಚನೆಯಿದೆ. ಉತ್ತಮ ಆಟಗಾರ್ತಿಯಂತೆ, ಅತ್ಯುತ್ತಮ ತಾಯಿಯೂ ಆಗಬೇಕೆಂದುಕೊಂಡಿದ್ದೇನೆ ಎಂದಿದ್ದಾರೆ.