Asianet Suvarna News Asianet Suvarna News

ಸೈನಾ, ಪ್ರಣೀತ್'ಗೆ ಸೋಲಿನ ಕಹಿ

ರಿಯೊ ಕೂಟದ ಬಳಿಕ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಸೈನಾ, ಆನಂತರದಲ್ಲಿ ಪಾಲ್ಗೊಂಡು ಮೂರು ಪ್ರಮುಖ ಟೂರ್ನಿಗಳಲ್ಲಿಯೂ ಪ್ರಶಸ್ತಿ ಗೆಲ್ಲಲು ವಿಫಲವಾದಂತಾಗಿದೆ.

Saina Nehwal B Sai Praneeth crash out Indias challenge ends in Macau Open

ಮಕೌ(ಡಿ.02): ಅಗ್ರ ಶ್ರೇಯಾಂಕಿತ ಆಟಗಾರ್ತಿ ಸೈನಾ ನೆಹ್ವಾಲ್ ಮತ್ತು ಯುವ ಆಟಗಾರ ಸಾಯಿ ಪ್ರಣೀತ್ ಮಕೌ ಓಪನ್ ಗ್ರಾಂಡ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲನುಭವಿಸುವುದರೊಂದಿಗೆ ಪಂದ್ಯಾವಳಿಯಲ್ಲಿ ಭಾರತದ ಸವಾಲಿಗೆ ತೆರೆಬಿದ್ದಿದೆ.

ಇಂದು ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಚೀನಿ ಆಟಗಾರ್ತಿ ಝಾಂಗ್ ಯಿಮಾನ್ ವಿರುದ್ಧ 17-21, 17-21 ಎರಡು ನೇರ ಗೇಮ್‌ಗಳ ಆಟದಲ್ಲಿ ಸೈನಾ ಪರಾಭವಗೊಂಡರು. ಇತ್ತ, ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ ಫೈನಲ್‌'ನಲ್ಲಿ ಸಾಯಿ ಪ್ರಣೀತ್ ವಿರುದ್ಧ ಚೀನಿ ಆಟಗಾರ ಝಾವೊ ಜುನ್ ಪೆಂಗ್ ವಿರುದ್ಧ 21-19, 21-9ರಿಂದ ಜಯ ಪಡೆದು ಭಾರತದ ಹೋರಾಟಕ್ಕೆ ತೆರೆ ಎಳೆದರು.

ಇದರೊಂದಿಗೆ ರಿಯೊ ಕೂಟದ ಬಳಿಕ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಸೈನಾ, ಆನಂತರದಲ್ಲಿ ಪಾಲ್ಗೊಂಡು ಮೂರು ಪ್ರಮುಖ ಟೂರ್ನಿಗಳಲ್ಲಿಯೂ ಪ್ರಶಸ್ತಿ ಗೆಲ್ಲಲು ವಿಫಲವಾದಂತಾಗಿದೆ.

ಕಳೆದೆರಡು ಸುತ್ತುಗಳಲ್ಲಿ ಎದುರಾದ ಮೂರು ಗೇಮ್‌ಗಳ ಕಠಿಣಕಾರಿ ಕಾದಾಟದಲ್ಲಿ ಹೇಗೂ ಗೆಲುವು ಕಂಡಿದ್ದ ಸೈನಾ, ಈ ಬಾರಿ ಮಾತ್ರ ನೇರ ಗೇಮ್‌ಗಳಲ್ಲಿಯೇ ಸೋಲಿನ ಆಘಾತ ಅನುಭವಿಸಿದರು. ವಿಶ್ವದ 10ನೇ ಶ್ರೇಯಾಂಕಿತೆ ಸೈನಾ ವಿರುದ್ಧ ಅಚ್ಚರಿಯುತ ಪ್ರದರ್ಶನ ನೀಡಿದ 226ನೇ ಶ್ರೇಯಾಂಕಿತ ಆಟಗಾರ್ತಿ ಝಾಂಗ್, ಮೊದಲಿಗೆ 4-2ರ ಮುನ್ನಡೆ ಸಾಧಿಸಿದರು. ಆದರೆ, ಸೈನಾ ಪ್ರತ್ಯಾಕ್ರಮಣಕ್ಕಿಳಿದು ಅಂತರವನ್ನು 8-9ಕ್ಕೆ ಇಳಿಸಿದರು. ಆದರೆ, ಈ ಹಂತದಲ್ಲಿ ಒಂದರ ಹಿಂದೊಂದರಂತೆ ಐದು ಪಾಯಿಂಟ್ಸ್ ಹೆಕ್ಕಿದ ಚೀನಿ ಆಟಗಾರ್ತಿ ಇದೇ ಹುರುಪಿನಲ್ಲಿ ಮೊದಲ ಗೇಮ್ ಅನ್ನು ತನ್ನದಾಗಿಸಿಕೊಂಡರು. ಬಳಿಕ ಎರಡನೇ ಗೇಮ್‌ನಲ್ಲಿ ಆಕ್ರಮಣಕಾರಿ ಆಟಕ್ಕಿಳಿದ ಸೈನಾ, 6-0 ಮುನ್ನಡೆ ಪಡೆದರೂ, ಒಡನೆಯೇ ತಿರುಗಿಬಿದ್ದ ಝಾಂಗ್ ಅಂತರವನ್ನು 7-7ಕ್ಕೆ ಸಮಗೊಳಿಸಿದರಲ್ಲದೆ, ಕ್ರಮೇಣ 11-9 ಮುನ್ನಡೆ ಸಾಧಿಸಿದರು. ಆದರೆ, ಸೈನಾ ತಿರುಗಿಬಿದ್ದು ಎರಡು ಪಾಯಿಂಟ್ಸ್‌ಗಳನ್ನು ಗಳಿಸಿದರೂ, ಝಾಂಗ್ ಅಂತರವನ್ನು 14-12ಕ್ಕೆ ಹಿಗಿಸಿದ್ದಲ್ಲದೆ, ಇದೇ ಹಾದಿಯಲ್ಲಿ ಸಾಗಿ 19-12ಕ್ಕೆ ಮುನ್ನಡೆದು ಅಂತಿಮವಾಗಿ ನೇರ ಗೇಮ್‌ಗಳಲ್ಲಿ ಸೈನಾ ವಿರುದ್ಧ ಗೆಲುವು ಪಡೆದರು.

 

Follow Us:
Download App:
  • android
  • ios