ಮುಂಬೈ(ಡಿ.13): ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ಗೆ ವಿದಾಯ ಹೇಳಿದ ಮೇಲೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ರಾಜ್ಯಸಭಾ ಸದಸ್ಯನಾಗಿರುವ ಸಚಿನ್ ತೆಂಡೂಲ್ಕರ್ ಇದೀಗ 2019ರ ಲೋಕಸಭಾ ಚುನಾವಣೆ ವೇಳೆಗೆ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಅನ್ನೋ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿದೆ.

ಇದನ್ನೂ ಓದಿ: ಐಪಿಎಲ್ ಹರಾಜು: 346 ಆಟಗಾರರ ಶಾರ್ಟ್‌ಲಿಸ್ಟ್-ಯಾರಿಗಿದೆ ಅವಕಾಶ?

ಮಾಜಿ ಕ್ರಿಕೆಟಿಗನ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ. ಇದು ವೈರಲ್ ಆಗಿದೆ. ಆದರೆ ಇದರ ಸತ್ಯಾಸತ್ಯತೆ ನೋಡಿದರೆ ಸಚಿನ್ ಯಾವುದೇ ರಾಜಕೀಯ ಪಕ್ಷ ಸೇರಿಕೊಂಡಿಲ್ಲ. 

ಇದನ್ನೂ ಓದಿ: ಐಪಿಎಲ್ ಹರಾಜು: ಮೂವರು ಸ್ಪಿನ್ನರ್ ಮೇಲೆ ಆರ್‌ಸಿಬಿ ಕಣ್ಣು!

ದೇವಸ್ಥಾನ ಭೇಟಿ ವೇಳೆ ಸಚಿನ್ ಕೇಸರಿ ಉಡುಪು ಧರಿಸಿದ್ದರು. ಇಷ್ಟೇ ಅಲ್ಲ ಹಣೆಗೆ ತಿಲಕ ಇಟ್ಟುಕೊಂಡಿದ್ದರು. ಇದೇ ಫೋಟವನ್ನ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಳಸಿಕೊಳ್ಳಲಾಗಿದೆ. ಈ ಮೂಲಕ ಸಚಿನ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಅನ್ನೋ ಸುಳ್ಳು ಸುದ್ದಿಗಳನ್ನ ಹರಡಲಾಗುತ್ತಿದೆ.