ಬೆಂಗಳೂರು(ಡಿ.11): ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಳೆದ 11 ಆವೃತ್ತಿಗಳಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ 12ನೇ ಆವೃತ್ತಿಗೆ ಸಿದ್ದತೆ ನಡೆಯುತ್ತಿದೆ. ಡಿಸೆಂಬರ್ 18 ರಂದು ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ಪ್ರತಿಭಾನ್ವಿತ ಆಟಗಾರರನ್ನ ಖರೀದಿಸಲು ಆರ್‌ಸಿಬಿ ಮುಂದಾಗಿದೆ.

ಈ ಬಾರಿಯ ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನ ಖರೀದಿಸಲು ಆರ್‌ಸಿಬಿ ಮುಂದಾಗಿದೆ. ಅದರಲ್ಲೂ ಮೂವರು ಸ್ಪಿನ್ನರ್ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಚಿತ್ತ ನೆಟ್ಟಿದೆ.

ಆ್ಯಡಂ ಜಂಪಾ
ಆಸ್ಟ್ರೇಲಿಯಾ ಲೆಗ್ ಸ್ಪಿನ್ನರ್ ಆ್ಯಡಮ್ ಜಂಪಾ ಟಿ20 ಮಾದರಿಗೆ ಹೇಳಿ ಮಾಡಿಸಿದ ಸ್ಪಿನ್ನರ್. ಭಾರತ ವಿರುದ್ಧದ ಟಿ20 ಪಂದ್ಯದಲ್ಲಿ 4 ವಿಕೆಟ್ ಕಬಳಿಸಿರುವ ಜಂಪಾ ಐಸಿಸಿ ಸ್ಥಾನ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಟಿ20 ಮಾದರಿಯಲ್ಲಿ 96 ಪಂದ್ಯ ಆಡಿರುವ ಜಂಪಾ 111 ವಿಕೆಟ್ ಕಬಳಿಸಿದ್ದಾರೆ. 2016ರ ಐಪಿಎಲ್ ಟೂರ್ನಿಯಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಪರ 6 ವಿಕೆಟ್ ಕಬಳಿಸಿದ್ದಾರೆ. ಇದೀಗ ಈ ಸ್ಪಿನ್ನರ್ ಖರೀದಿಸಲು ಆರ್‌ಸಿಬಿ ಮುಂದಾಗಿದೆ.

ಆದಿಲ್ ರಶೀದ್
ಐಸಿಸಿ ಬೌಲರ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಅನುಭವಿ ಆಟಗಾರ. 2019ರ ವಿಶ್ವಕಪ್ ಟೂರ್ನಿ ದೃಷ್ಟಿಯಿಂದ ಯಜುವೇಂದ್ರ ಚೆಹಾಲ್‌ಗೆ ವಿಶ್ರಾಂತಿ ನೀಡಲು ಬಯಸ್ಸಿದ್ದಲ್ಲಿ, ಆದಿಲ್ ರಶೀದ್ ಉತ್ತಮ ಆಯ್ಕೆಯಾಗಲಿದೆ.

ವರುಣ್ ಚಕ್ರವರ್ತಿ
ತಮಿಳುನಾಡು ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ ವರುಣ್ ಚಕ್ರವರ್ತಿ ಈ ಬಾರಿಯ ಐಪಿಎಲ್‌ನಲ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ. ಮಧುರೈ ತಂಡದ ಪರ 9 ವಿಕೆಟ್ ಕಬಳಿಸಿದ ವರುಣ್ ಖರೀದಸು ಆರ್‌ಸಿಬಿ ಮುಂದಾಗೋ ಸಾಧ್ಯತೆ ಹೆಚ್ಚಿದೆ.