ಈ ಪಂದ್ಯದಲ್ಲಿ 9 ವಿಕೆಟ್ ಕಬಳಿಸಿದ ಮಾರ್ನೆ ಮಾರ್ಕೆಲ್ ಪಂದ್ಯಪುರುಷೋತ್ತಮ ಗೌರವಕ್ಕೆ ಭಾಜನರಾದರು.

ಕೇಪ್‌ಟೌನ್(ಮಾ.25): ವೇಗಿ ಮಾರ್ನೆ ಮಾರ್ಕೆಲ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಮೂರನೇ ಟೆಸ್ಟ್'ನಲ್ಲಿ 322 ರನ್'ಗಳ ಹೀನಾಯ ಸೋಲು ಅನುಭವಿಸಿದೆ. 429 ರನ್'ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ನಾಟಕೀಯ ಕುಸಿತ ಕಂಡು ಕೇವಲ 107 ರನ್'ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ನಾಲ್ಕು ಪಂದ್ಯಗಳ ಸರಣಿಯಲ್ಲಿ ಆಫ್ರಿಕಾ 2-1 ರ ಮುನ್ನಡೆ ಸಾಧಿಸಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಕ್ಷಿಣ ಆಫ್ರಿಕಾ ನೀಡಿದ್ದ ಬೃಹತ್ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ಒಂದು ಹಂತದಲ್ಲಿ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್'ಗೆ ವಾರ್ನರ್ ಹಾಗೂ ಬೆನ್'ಕ್ರಾಫ್ಟ್ ಜೋಡಿ 57 ರನ್'ಗಳ ಜತೆಯಾಟವಾಡಿತು. ಆ ನಂತರ ದಿಢೀರ್ ಕುಸಿತ ಕಂಡ ಆಸೀಸ್ ಪಡೆ ಇನ್ನು ತಂಡದ ಖಾತೆಗೆ 50 ರನ್ ಸೇರಿಸುವಷ್ಟರಲ್ಲಿ ಇನ್ನು 9 ವಿಕೆಟ್ ಕಳೆದುಕೊಂಡು ಇನ್ನೊಂದು ದಿನ ಬಾಕಿ ಇರುವಂತೆಯೇ ಹರಿಣಗಳಿಗೆ ಶರಣಾಯಿತು.

ಈ ಪಂದ್ಯದಲ್ಲಿ 9 ವಿಕೆಟ್ ಕಬಳಿಸಿದ ಮಾರ್ನೆ ಮಾರ್ಕೆಲ್ ಪಂದ್ಯಪುರುಷೋತ್ತಮ ಗೌರವಕ್ಕೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್:

ದ.ಆಫ್ರಿಕಾ 311 & 373

ಆಸ್ಟ್ರೇಲಿಯಾ 255 & 107

ಪಂದ್ಯ ಪುರುಷೋತ್ತಮ: ಮಾರ್ನೆ ಮಾರ್ಕೆಲ್