ಲೀಗ್‌'ನ ಕೆಲ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದ್ದ ವೇಗಿ ಶ್ರೀನಾಥ್ ಅರವಿಂದ್, ಈ ಬಾರಿ ಮತ್ತೆ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ಬೆಂಗಳೂರು(ನ.30): ಇದೇ ಡಿ.7 ರಿಂದ 11 ರವರೆಗೆ ನಡೆಯಲಿರುವ ರಣಜಿ ಟ್ರೋಫಿ ಪಂದ್ಯಾವಳಿಯ ಮುಂಬೈ ವಿರುದ್ಧದ ಕ್ವಾರ್ಟರ್‌'ಫೈನಲ್ ಪಂದ್ಯಕ್ಕಾಗಿ 16 ಮಂದಿ ಆಟಗಾರರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.

ಲೀಗ್‌'ನ ಕೆಲ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದ್ದ ವೇಗಿ ಶ್ರೀನಾಥ್ ಅರವಿಂದ್, ಈ ಬಾರಿ ಮತ್ತೆ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಆದರೆ ಅಂತಿಮ 11ರ ತಂಡದಲ್ಲಿ ಆಡಿಸುವುದು ಇನ್ನೂ ನಿರ್ಧಾರವಾಗಿಲ್ಲ.

ತಂಡ: ವಿನಯ್ ಕುಮಾರ್ (ನಾಯಕ), ಕರುಣ್ ನಾಯರ್, ಮಯಾಂಕ್ ಅಗರ್‌'ವಾಲ್, ಆರ್. ಸಮರ್ಥ್, ಡಿ. ನಿಶ್ಚಲ್, ಸ್ಟುವರ್ಟ್ ಬಿನ್ನಿ, ಸಿ.ಎಂ. ಗೌತಮ್, ಶ್ರೇಯಸ್ ಗೋಪಾಲ್, ಕೆ. ಗೌತಮ್, ಅಭಿಮನ್ಯು ಮಿಥುನ್, ಎಸ್. ಅರವಿಂದ್, ಪವನ್ ದೇಶಪಾಂಡೆ, ಜೆ. ಸುಚಿತ್, ಮಿರ್ ಕುನೈನ್ ಅಬ್ಬಾಸ್, ಶರತ್ ಶ್ರೀನಿವಾಸ್, ರೋನಿತ್ ಮೊರೆ.