ಢಾಕಾ(ಆ.18): ದಕ್ಷಿಣ ಆಫ್ರಿಕಾದ ರಸೆಲ್‌ ಡೊಮಿಂಗೊ ಬಾಂಗ್ಲಾದೇಶ ಕ್ರಿಕೆಟ್‌ ತಂಡದ ನೂತನ ಕೋಚ್‌ ಆಗಿ ನೇಮಕಗೊಂಡಿದ್ದಾರೆ. 

ವಿಶ್ವಕಪ್ 2019: ಸುನಿಲ್‌ ಜೋಶಿ ಗುತ್ತಿಗೆ ವಿಸ್ತರಿಸದ ಬಾಂಗ್ಲಾದೇಶ

ಶನಿವಾರ ಇಂಗ್ಲೆಂಡ್‌ನ ಸ್ಟೀವ್‌ ರೋಡ್ಸ್‌ ಬದಲಿಗೆ ಡೊಮಿಂಗೊರನ್ನು ನೇಮಕ ಮಾಡಿರುವುದಾಗಿ ಬಾಂಗ್ಲಾ ಕ್ರಿಕೆಟ್‌ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿತು. 44 ವರ್ಷದ ಡೊಮಿಂಗೊ, ಬಾಂಗ್ಲಾ ಕ್ರಿಕೆಟ್‌ ಜತೆ 2 ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದು, ಬುಧವಾರ ಹುದ್ದೆ ಅಲಂಕರಿಸಲಿದ್ದಾರೆ ಎನ್ನಲಾಗಿದೆ. 

ಸಲಹಾ ಸಮಿತಿ ಮುಂದೆ ಹೊಸ ಬೇಡಿಕೆಯಿಟ್ಟ ರವಿಶಾಸ್ತ್ರಿ..!

ಡೊಮಿಂಗೊ 2011ರಲ್ಲಿ ದಕ್ಷಿಣ ಆಫ್ರಿಕಾದ ಸಹಾಯಕ ಕೋಚ್‌ ಆಗಿದ್ದರು. 2013ರಲ್ಲಿ ಹರಿಣಗಳ ತಂಡದ ಪ್ರಧಾನ ಕೋಚ್‌ ಆಗಿ ನೇಮಕಗೊಂಡ ಅವರು, 2017ರ ವರೆಗೂ ತಂಡಕ್ಕೆ ಮಾರ್ಗದರ್ಶನ ಮಾಡಿದ್ದರು.