ಕಿಂಗ್ಸ್’ಗೆ ಸವಾಲಿನ ಗುರಿ ನೀಡಿದ ರಾಯಲ್ಸ್

RR Post 158 for 8 vs KXIP
Highlights

ಸವಾಲಿನ ಗುರಿ ಬೆನ್ನತ್ತಿದ ಪಂಜಾಬ್ ಮೂರನೇ ಓವರ್’ನಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಗೇಲ್ ಹಾಗೂ ಅಶ್ವಿನ್’ರನ್ನು ಒಂದೇ ಓವರ್’ನಲ್ಲಿ ಬಲಿ ಪಡೆಯುವಲ್ಲಿ ಕನ್ನಡಿಗ ಕೆ. ಗೌತಮ್ ಯಶಸ್ವಿಯಾಗಿದ್ದಾರೆ.

ಜೈಪುರ[ಮೇ.08]: ಜೋಸ್ ಬಟ್ಲರ್[82] ಆಕರ್ಷಕ ಅರ್ಧಶತಕದ ಹೊರತಾಗಿಯೂ ಆ್ಯಂಡ್ರೋ ಟೈ ಹಾಗೂ ಮುಜೀಬ್ ಉರ್ ರೆಹಮಾನ್ ಬಿಗುವಿನ ಬೌಲಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು 158 ರನ್’ಗಳಿಗೆ ನಿಯಂತ್ರಿಸಿದೆ. ಇನ್ನು ಸವಾಲಿನ ಗುರಿ ಬೆನ್ನತ್ತಿದ ಪಂಜಾಬ್ ಮೂರನೇ ಓವರ್’ನಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಗೇಲ್ ಹಾಗೂ ಅಶ್ವಿನ್’ರನ್ನು ಒಂದೇ ಓವರ್’ನಲ್ಲಿ ಬಲಿ ಪಡೆಯುವಲ್ಲಿ ಕನ್ನಡಿಗ ಕೆ. ಗೌತಮ್ ಯಶಸ್ವಿಯಾಗಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ರಾಯಲ್ಸ್ ಸ್ಫೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಬಟ್ಲರ್-ರಹಾನೆ ಜೋಡಿ 3.4 ಓವರ್’ಗಳಲ್ಲಿ 37 ರನ್ ಕೂಡಿಹಾಕಿತು. ರಹಾನೆ 9 ರನ್ ಬಾರಿಸಿ ಟೈಗೆ ವಿಕೆಟ್ ಒಪ್ಪಿಸಿದರು. ಎರಡನೇ ವಿಕೆಟ್’ಗೆ ಆಡಲಿಳಿದ ಕೆ.ಗೌತಮ್[8] ಸ್ಟೋನಿಸ್’ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಇನ್ನು ಮೂರನೇ ವಿಕೆಟ್’ಗೆ ಜತೆಯಾದ ಸ್ಯಾಮ್ಸನ್-ಬಟ್ಲರ್ ಜೋಡಿ 53 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಸ್ಯಾಮ್ಸನ್ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ನಿರ್ಭಯವಾಗಿ ಬ್ಯಾಟ್ ಬೀಸಿದ ಬಟ್ಲರ್ 58 ಎಸೆತಗಳಲ್ಲಿ 82 ರನ್ ಚಚ್ಚಿದರು. ಕೊನೆಯ ಓವರ್’ನಲ್ಲಿ ಟೈ 3 ವಿಕೆಟ್ ಕಬಳಿಸಿ ರಾಯಲ್ಸ್ ರನ್ ಓಟಕ್ಕೆ ಬ್ರೇಕ್ ಹಾಕಿದರು.
ರಾಜಸ್ಥಾನ ಪರ ಟೈ 4 ವಿಕೆಟ್ ಪಡೆದರೆ, ಮುಜೀಬ್ 2 ಹಾಗೂ ಸ್ಟೋನಿಸ್ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: 
ರಾಜಸ್ಥಾನ ರಾಯಲ್ಸ್: 158/8
ಜೋಸ್ ಬಟ್ಲರ್: 82
ಟೈ: 34/4
[* ವಿವರ ಅಪೂರ್ಣ]   

loader