ಶ್ರೀಲಂಕಾ ಸರಣಿಗೆ ಭಾರತ ತಂಡ ಪ್ರಕಟ: ರೋಹಿತ್ ನಾಯಕ ಉಳಿದವರ ಪಟ್ಟಿ ಇಂತಿದೆ

First Published 25, Feb 2018, 5:13 PM IST
Rohit Sharma to lead India in Sri Lanka T20 tri series
Highlights

ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಕೇಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಮುಂಬೈ(ಫೆ.25): ಮಾರ್ಚ್ 6ರಿಂದ ಆರಂಭವಾಗುವ ಶ್ರೀಲಂಕಾ, ಬಾಂಗ್ಲಾದೇಶ ವಿರುದ್ಧದ ತ್ರಿಕೋನ ಸರಣಿಗೆ ರೋಹಿತ್ ಶರ್ಮಾ ನಾಯಕತ್ವದ 15 ಮಂದಿಯ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ.

ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಕೇಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ತಮಿಳುನಾಡಿನ ಆಲ್'ರೌಂಡರ್ ವಿಜಯ್ ಶಂಕರ್ ಅವರಿಗೆ ಸ್ಥಾನ ನಿಡಲಾಗಿದ್ದು, ಇಬ್ಬರು ಕನ್ನಡಿಗರು ಆಯ್ಕಯಾಗಿದ್ದಾರೆ.

ತಂಡ: ರೋಹಿತ್ ಶರ್ಮಾ(ನಾಯಕ),ಶಿಖರ್ ಧವನ್ (ಉಪ ನಾಯಕ), ಕೆ.ಎಲ್.ರಾಹುಲ್, ಸುರೇಶ್ ರೈನಾ, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್ (ವಿಕೇಟ್ ಕೀಪರ್), ದೀಪಕ್ ಹೂಡ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಾಲ್, ಅಕ್ಸರ್ ಪಟೇಲ್, ವಿಜಯ್ ಶಂಕರ್, ಶಾರ್ದೂಲ್ ಠಾಕೂರ್, ಜಯದೇವ್ ಉನಾದಕ್ಟ್, ಮೊಹಮದ್ ಸಿರಾಜ್, ರೀಶಬ್ ಪಂತ್(ವಿಕೇಟ್ ಕೀಪರ್)

loader