ಶ್ರೀಲಂಕಾ ವಿರುದ್ಧ ಸರಣಿಗೆ ರೋಹಿತ್ ನಾಯಕ, ಕೊಹ್ಲಿ,ಧೋನಿ ಸೇರಿದಂತೆ ಹಲವರಿಗೆ ವಿಶ್ರಾಂತಿ

Rohit Sharma set to lead in Sri Lanka tri series
Highlights

ಕೇದರ್ ಜಾಧವ್, ರಿಶಬ್ ಪಂತ್ ಸೇರಿದಂತೆ ಹಲವರು ಸರಣಿಗೆ ಆಯ್ಕೆಯಾಗುವ ಸಂಭವವಿದೆ.

ನವದೆಹಲಿ(ಫೆ.24): ಮುಂದಿನ ತಿಂಗಳು ಮಾರ್ಚ್'ನಿಂದ ಶ್ರೀಲಂಕಾದಲ್ಲಿ ಆರಂಭವಾಗುವ ಬಾಂಗ್ಲಾದೇಶ ಒಳಗೊಂಡ ತ್ರಿಕೋನ ಸರಣಿಗೆ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು ಉಪನಾಯಕ ರೋಹಿತ್ ಶರ್ಮಾ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ದಕ್ಷಿಣ ಆಫ್ರಿಕಾದ ಸರಣಿ ಇಂದು ಮುಕ್ತಾಯಗೊಳ್ಳಲಿದ್ದು ವಿರಾಟ್ ಕೊಹ್ಲಿ, ವಿಕೇಟ್ ಕೀಪರ್ ಎಂ.ಎಸ್.ಧೋನಿ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಕೂಡ ಲಭ್ಯವಿರುವುದಿಲ್ಲ' ಕೊಹ್ಲಿ ಅನುಪಸ್ಥಿತಿ ಹಿನ್ನಲೆಯಲ್ಲಿ ರೋಹಿತ್ ಶರ್ಮಾ ನಾಯಕರಾಗಿರುತ್ತಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಕೇದರ್ ಜಾಧವ್, ರಿಶಬ್ ಪಂತ್ ಸೇರಿದಂತೆ ಹಲವರು ಈ ಸರಣಿಗೆ ಆಯ್ಕೆಯಾಗುವ ಸಂಭವವಿದೆ. ಶ್ರೀಲಂಕಾ ವಿರುದ್ಧದ ಸರಣಿಯು ಮಾರ್ಚ್ 6ರಿಂದ 18ರ ನಡುವೆ ನಡೆಯುವ ಸಂಭವವಿದೆ.    

loader