ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದ ಬೆನ್ನಲ್ಲೇ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳ್ತಾರಾ? ಕಳೆದ 24 ಗಂಟೆಗಳಿಂದ ಹರಿದಾಡುತ್ತಿರುವ ಈ ನಿವೃತ್ತಿ ಗಾಸಿಪ್ ಕ್ರಿಕೆಟ್ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಅಭಿಮಾನಿಗಳ ಆತಂಕದ ನಡುವೆ ಕೊನೆಗೂ ಬಿಸಿಸಿಐ ಮೌನ ಮುರಿದಿದ್ದು, ಫಸ್ಟ್ ರಿಯಾಕ್ಷನ್ ನೀಡಿದೆ!
ಜುಲೈ 19ರ ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದ ಬೆನ್ನಲ್ಲೇ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳ್ತಾರಾ? ಕಳೆದ 24 ಗಂಟೆಗಳಿಂದ ಹರಿದಾಡುತ್ತಿರುವ ಈ ನಿವೃತ್ತಿ ಗಾಸಿಪ್ ಕ್ರಿಕೆಟ್ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಅಭಿಮಾನಿಗಳ ಆತಂಕದ ನಡುವೆ ಕೊನೆಗೂ ಬಿಸಿಸಿಐ ಮೌನ ಮುರಿದಿದ್ದು, ಫಸ್ಟ್ ರಿಯಾಕ್ಷನ್ ನೀಡಿದೆ! ರೋಹಿತ್ ನಿವೃತ್ತಿ ನಿರ್ಧಾರದ ಬಗ್ಗೆ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಬಿಚ್ಚಿಟ್ಟ ಆ ಶಾಕಿಂಗ್ ಸತ್ಯ ಇಲ್ಲಿದೆ ನೋಡಿ.
ಬಿಸಿಸಿಐ ಹೇಳಿದ್ದೇನು?
ಇಂಗ್ಲೆಂಡ್ ವಿರುದ್ಧ ಭಾನುವಾರ ಲಾರ್ಡ್ಸ್‌ನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯವೇ ರೋಹಿತ್ ಶರ್ಮಾ ಅವರ ಕೊನೆಯ ಪಂದ್ಯವಲ್ಲ ಎಂದು ಹೇಳುವ ಮೂಲಕ ಬಿಸಿಸಿಐ ನಿವೃತ್ತಿ ಊಹಾಪೋಹಗಳಿಗೆ ತೆರೆ ಎಳೆದಿದೆ. ಸರಣಿ ಮುಗಿದ ಬಳಿಕ ರೋಹಿತ್ ಭವಿಷ್ಯದ ಯೋಜನೆಗಳಲ್ಲಿ ಇರುವುದಿಲ್ಲ ಎಂಬ ವರದಿಗಳ ಬೆನ್ನಲ್ಲೇ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು. ಆದರೆ ಭಾನುವಾರದ ಪಂದ್ಯದ ನಂತರ ರೋಹಿತ್ ನಿವೃತ್ತಿ ಪಡೆಯುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಬಿಸಿಸಿಐ ಜಂಟಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪಿಟಿಐಗೆ ಸ್ಪಷ್ಟಪಡಿಸಿದ್ದಾರೆ. ಹಿಟ್‌ಮ್ಯಾನ್ ಭವಿಷ್ಯದ ಕುರಿತಾದ ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ.
ಸೈಕಿಯಾ ಹೇಳಿದ್ದೇನು?
ಲಾರ್ಡ್ಸ್ ಏಕದಿನ ಪಂದ್ಯ ರೋಹಿತ್ ಅವರ ಕೊನೆಯ ಪಂದ್ಯವಲ್ಲ" ಎಂದು ಸೈಕಿಯಾ ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದರು, "ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಊಹಾಪೋಹಗಳಿವೆ. ಭಾನುವಾರ ಲಾರ್ಡ್ಸ್‌ನಲ್ಲಿ ರೋಹಿತ್ ತಮ್ಮ ಕೊನೆಯ ಪಂದ್ಯವನ್ನು ಆಡುತ್ತಾರೆ ಎಂಬ ಬಗ್ಗೆ ಯಾವುದೇ ಮಾತುಕತೆ ಇಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ರೋಹಿತ್ ಭಾರತೀಯ ಏಕದಿನ ತಂಡದ ನಿಯಮಿತ ಸದಸ್ಯರಾಗಿದ್ದಾರೆ ಮತ್ತು ಅವರು ತಂಡದ ಯೋಜನೆಗಳ ಭಾಗವಾಗಿರುವವರೆಗೆ ದೇಶಕ್ಕಾಗಿ ಆಡುವುದನ್ನು ಮುಂದುವರಿಸುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಲಾರ್ಡ್ಸ್ ಏಕದಿನ ಪಂದ್ಯ ಅವರ ಕೊನೆಯ ಪಂದ್ಯವಲ್ಲ ಎಂದು ಅವರು ಹೇಳಿದರು.
ಊಹಾಪೋಹುಗಳಿಗೆ ತೆರೆ ಎಳೆದ ಬಿಸಿಸಿಐ!
ರೋಹಿತ್ ಶರ್ಮಾ ಭಾನುವಾರ ಲಾರ್ಡ್ಸ್‌ನಲ್ಲಿ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಆಡಲಿದ್ದಾರೆ ಎಂಬ ಊಹಾಪೋಹಗಳಿಗೆ ಬಿಸಿಸಿಐ ತೆರೆ ಎಳೆದಿದೆ. 2027ರ ಏಕದಿನ ವಿಶ್ವಕಪ್ ಯೋಜನೆಗಳಲ್ಲಿ ರೋಹಿತ್ ಹೆಸರಿಲ್ಲ ಎಂದು ರಾಷ್ಟ್ರೀಯ ಆಯ್ಕೆದಾರರು ತಿಳಿಸಿದ ಬೆನ್ನಲ್ಲೇ, ಅವರು ನಿವೃತ್ತಿ ಘೋಷಿಸಲಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು. ಈಗಾಗಲೇ ಟೆಸ್ಟ್ ಹಾಗೂ ಟಿ20ಐಗೆ ಗುಡ್‌ಬೈ ಹೇಳಿರುವ ಹಿಟ್‌ಮ್ಯಾನ್, ಏಕದಿನ ಕ್ರಿಕೆಟ್‌ನಿಂದಲೂ ಸದ್ಯಕ್ಕೆ ಕೆಳಗಿಳಿಯುತ್ತಿಲ್ಲ ಎಂದು ಬಿಸಿಸಿಐ ಜಂಟಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟಪಡಿಸಿದ್ದಾರೆ.

