ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಪುತ್ರರ ನಂತರ, ಇದೀಗ ಮತ್ತೊಬ್ಬ ದಿಗ್ಗಜನ ಪುತ್ರ ಕ್ರಿಕೆಟ್ ಜಗತ್ತಿನಲ್ಲಿ ಸದ್ದು ಮಾಡುತ್ತಿದ್ದಾರೆ. ಇದೀಗ ಅಂಡರ್-19 ತಂಡದಲ್ಲಿ ಸ್ಥಾನ ಪಡೆದಿರುವ ಅವರು, ಕ್ರಿಕೆಟ್‌ ಲೋಕದಲ್ಲಿ ಸದ್ದು ಮಾಡುತ್ತಿದ್ದಾರೆ.  

ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರಿಗೆ ಈ ವರ್ಷದ ಐಪಿಎಲ್‌ನಲ್ಲಿ ಆಡಲು ಹೆಚ್ಚಿನ ಅವಕಾಶ ಸಿಗಲಿಲ್ಲ, ಆದರೆ ಲಕ್ನೋದಿಂದ ಸಿಕ್ಕ ಅವಕಾಶವನ್ನು ಅವರು ಸದ್ಬಳಿಸಿಕೊಂಡಿದ್ದಾರೆ. ಸಚಿನ್ ಮಗನ ನಂತರ, ಈಗ ರಾಹುಲ್ ದ್ರಾವಿಡ್ ಮಗ ಕೂಡ ಅಂಡರ್‌ 19 ಕ್ರಿಕೆಟ್ ಆಡುತ್ತಿದ್ದಾರೆ. ದ್ರಾವಿಡ್ ಅವರ ಪುತ್ರ ಅನ್ವೇ ದ್ರಾವಿಡ್ ಶ್ರೀಲಂಕಾ ಅಂಡರ್ -19 ತಂಡದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅಬ್ಬರದ ಅರ್ಧಶತಕ ಗಳಿಸಿದರು. ಸಚಿನ್ ಮತ್ತು ರಾಹುಲ್ ದ್ರಾವಿಡ್ ನಂತರ, ಈಗ ಮತ್ತೊಬ್ಬ ದಿಗ್ಗಜ ಆಟಗಾರನ ಮಗ 19 ವರ್ಷದೊಳಗಿನವರ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಯಾರು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ ಇಲ್ಲಿದೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾರು ಆ ದಿಗ್ಗಜ!

ಹೌದು ಇಂಗ್ಲೆಂಡ್‌ನ ದಂತಕಥೆ ಆಲ್‌ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಅವರ ಪುತ್ರ ರಾಕಿ ಫ್ಲಿಂಟಾಫ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ಸುದ್ದಿಯಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಯೂತ್ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ನ ಅಂಡರ್-19 ತಂಡದಲ್ಲಿ ರಾಕಿ ಆಯ್ಕೆಯಾಗಿದ್ದಾರೆ.ರಾಕಿಯ ವೃತ್ತಿಜೀವನ ಭರ್ಜರಿಯಾಗಿ ಆರಂಭವಾಗಿದೆ.

ಇನ್ನು ರಾಕಿ ಯುಗಾರಂಭ!

ಬಲಗೈ ಬ್ಯಾಟ್ಸ್‌ಮನ್ ಆಗಿರುವ ರಾಕಿ, ಇದುವರೆಗೆ 5 ಫಸ್ಟ್‌ ಕ್ಲಾಸ್‌ 8 ಲಿಸ್ಟ್ ಎ ಪಂದ್ಯಗಳನ್ನಾಡಿದ್ದಾರೆ. ಇದಲ್ಲದೆ, ರಾಕಿ ಇಂಗ್ಲೆಂಡ್ ಲಯನ್ಸ್ ಮತ್ತು ಲಂಕಾಷೈರ್‌ನ ಎರಡನೇ ಇಲೆವೆನ್ ತಂಡದ ಭಾಗವಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಒಡಿಐ ಸರಣಿಯಲ್ಲಿ ರಾಕಿ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ಅವರು 29, ಔಟಾಗದೆ 79 ಮತ್ತು 55 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ಲಯನ್ಸ್ ಪರ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದಾಖಲೆ ಬರೆದ ರಾಕಿ ಪ್ಲಿಂಟಾಫ್!

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ರಾಕಿ ಫ್ಲಿಂಟಾಫ್ ಎರಡನೇ ಸ್ಥಾನ ಪಡೆದಿದ್ದಾರೆ. 81.5 ಸರಾಸರಿಯಲ್ಲಿ ಒಟ್ಟು 163 ರನ್ ಗಳಿಸಿದ ಅವರು 2 ಅರ್ಧಶತಕ ಗಳಿಸಿದ್ದಾರೆ. ಮುಂದಿನ ಸರಣಿಯಲ್ಲಿ ರಾಕಿ ಮೈದಾನಕ್ಕೆ ಇಳಿದರೆ, ಅವರು ಯೂತ್ ಟೆಸ್ಟ್ ಸರಣಿಯ ಭಾಗವಾಗುವುದು ಸತತ ಮೂರನೇ ಸೀಸನ್ ಆಗಿರುತ್ತದೆ. ಅವರು ಈ ಹಿಂದೆ 2025ರಲ್ಲಿ ಭಾರತದ ವಿರುದ್ಧ 93 ರನ್ ಗಳಿಸಿದ್ದರು ಮತ್ತು ಅದಕ್ಕೂ ಹಿಂದಿನ ಸೀಸನ್‌ನಲ್ಲಿ ಶ್ರೀಲಂಕಾ ವಿರುದ್ಧ ರಾಕಿ 106 ರನ್ ಗಳಿಸಿದ್ದಾರೆ.

ರೋಲ್ಫ್ ಆಲ್ಬರ್ಟ್ ಗೆ ನಾಯಕತ್ವ!

ದಕ್ಷಿಣ ಆಫ್ರಿಕಾ ವಿರುದ್ಧದ ಯೂತ್ ಟೆಸ್ಟ್ ಸರಣಿಗೆ ಇಂಗ್ಲೆಂಡ್ 15 ಜನರ ತಂಡವನ್ನು ಪ್ರಕಟಿಸಿದ್ದು, ಸರ್ರೆಯ ರೋಲ್ಫ್ ಆಲ್ಬರ್ಟ್ ನಾಯಕತ್ವ ವಹಿಸಿದ್ದಾರೆ. ಆಲ್ಬರ್ಟ್ ನಾಯಕತ್ವದಲ್ಲಿ ಇಂಗ್ಲೆಂಡ್ ODI ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಸೋಮವಾರ ನಡೆದ ಅಂತಿಮ ODI ಪಂದ್ಯದಲ್ಲಿ ಇಂಗ್ಲೆಂಡ್ ದಕ್ಷಿಣ ಆಫ್ರಿಕಾವನ್ನು 76 ರನ್‌ಗಳಿಂದ ಸೋಲಿಸಿತು. ಇದರ ನಂತರ, ಮುಂದಿನ ವಾರ ಯೂತ್ ಟೆಸ್ಟ್ ಆರಂಭವಾಗಲಿದೆ.