ಜಮೈಕಾ(ಆ.31): ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾದಲ್ಲಿ ಒಳಜಗಳ ಬೀದಿಗೆ ಬಂದಿತ್ತು. ಒಳಗೊಳಗೆ ಮುಸುಕಿನ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಬಹಿರಂಗವಾಗಿತ್ತು. ಆದರೆ ಬಿಸಿಸಿಐ, ಟೀಂ ಮ್ಯಾನೇಜ್ಮೆಂಟ್ ಅದೆಷ್ಟೇ ಪ್ರಯತ್ನ ಪಟ್ಟರೂ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವಿನ ಕೋಲ್ಡ್ ವಾರ್ ಜಗಜ್ಜಾಹೀರಾಗಿತ್ತು. ವಿಂಡೀಸ್ ಪ್ರವಾಸದಲ್ಲಿ ಎಲ್ಲವೂ ತಣ್ಣಗಾಗಿದೆ ಅಂದುಕೊಳ್ಳುವಾಗಲೇ ರೋಹಿತ್ ಶರ್ಮಾ ಮತ್ತೆ ಸ್ಫೋಟಿಸೋ ಮೂಲಕ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಸಾಬೀತಾಗಿದೆ.

ಇದನ್ನೂ ಓದಿ: 'ನಾನು ದೇಶಕ್ಕಾಗಿ ಆಡುತ್ತೇನೆಯೇ ಹೊರತು, ತಂಡಕ್ಕಾಗಿ ಅಲ್ಲ': ರೋಹಿತ್ ಮಾತಿನ ಮರ್ಮವೇನು..?

ವೆಸ್ಟ್ ಇಂಡೀಸ್ ವಿರುದ್ದದ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾದ ರೋಹಿತ್ ಶರ್ಮಾಗೆ, ನಾಯಕ ವಿರಾಟ್ ಕೊಹ್ಲಿ ಅವಕಾಶ ನೀಡಿಲ್ಲ. ಇತ್ತ ಸಿಕ್ಕ ಅವಕಾಶಲ್ಲಿ ಕನ್ನಡಿಗ ಕೆಎಲ್ ರಾಹುಲ್ ದಿಟ್ಟ ಹೋರಾಟವೂ ನೀಡಿಲ್ಲ. ಹೀಗಾಗಿ ರಾಹುಲ್ ಕಳಪೆ ಫಾರ್ಮ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಇದೇ ಟೀಕೆಗೆ ರೋಹಿತ್ ಶರ್ಮಾ ಲೈಕ್ ಮಾಡೋ ಮೂಲಕ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದನ್ನು ಪರೋಕ್ಷವಾಗಿ ಸೂಚಿಸಿದ್ದಾರೆ.

ಇದನ್ನೂ ಓದಿ: ಕೊಹ್ಲಿ-ರೋಹಿತ್ ಕೋಲ್ಡ್ ವಾರ್; ಕೊನೆಗೂ ಸ್ಪಷ್ಟನೆ ನೀಡಿದ ನಾಯಕ!

ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಎಲ್ ರಾಹುಲ್ ಸರಾಸರಿ 35, ಆದರೆ ಹಲವು ಭಾರತೀಯರಿಗೆ ಈತ ಡಾನ್ ಬ್ರಾಡ್ಮನ್. ಇತ್ತ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಸರಾಸರಿ 40. ಕಳೆದೆರಡು ವರ್ಷದಲ್ಲಿ ರೋಹಿತ್ ಸರಾಸರಿ 70. ಇಷ್ಟಾದರೂ ರೋಹಿತ್‌ಗೆ ಸ್ಥಾನವಿಲ್ಲ ಅನ್ನೋ ಸಾಮಾಜಿಕ ಜಾಲತಾಣದ ಪೋಸ್ಟ್ ವೈರಲ್ ಆಗುತ್ತಿದೆ. ಈ ಪೋಸ್ಟನ್ನು ರೋಹಿತ್ ಶರ್ಮಾ ಲೈಕ್ ಮಾಡಿದ್ದಾರೆ. ರೋಹಿತ್ ಲೈಕ್ ಮೂಲಕ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಪರೋಕ್ಷ ಸಮರ ಸಾರಿದ್ದಾರೆ.