ಮುಂಬೈ(ಜು.30): ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಸೋಮವಾರ ತಮ್ಮ ಸಹ ಆಟಗಾರ, ಸೀಮಿತ ಓವರ್‌ ತಂಡದ ಉಪನಾಯಕ ರೋಹಿತ್‌ ಶರ್ಮಾ ಜತೆಗಿನ ಮನಸ್ತಾಪದ ಆರೋಪವನ್ನು ತಳ್ಳಿಹಾಕಿದ್ದಾರೆ. ಇದು ಕೇವಲ ವದಂತಿ, ಜನ ಸುಳ್ಳು ಸುದ್ದಿ ಹಬ್ಬಿಸುತ್ತ ಆಟಗಾರರ ವೈಯಕ್ತಿಕ ಬದುಕಿಗೆ ಧಕ್ಕೆಯಾಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸೋಮವಾರ ವೆಸ್ಟ್‌ಇಂಡೀಸ್‌ ಪ್ರವಾಸಕ್ಕೆ ಹೊರಡುವ ಮುನ್ನ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಇದನ್ನೂ ಓದಿ: ಕೊಹ್ಲಿ -ರೋಹಿತ್ ನಡುವೆ ವಾರ್; ಸೀಕ್ರೆಟ್ ಬಿಚ್ಚಿಟ್ಟ ಅನುಷ್ಕಾ ಶರ್ಮಾ!

‘ನಮ್ಮ ನಡುವಿನ ಸಂಬಂಧಕ್ಕೆ ಅಡ್ಡಿಪಡಿಸುವ ಪ್ರಯತ್ನವಿದು ಎನ್ನುವುದು ನನ್ನ ಅಭಿಪ್ರಾಯ. ಇಂತಹ ಸುದ್ದಿಗಳನ್ನು ಓದಲು ಹಾಸ್ಯಸ್ಪದ ಎನಿಸುತ್ತದೆ. ನಾನು 11 ವರ್ಷದಿಂದ ಕ್ರಿಕೆಟ್‌ ಆಡುತ್ತಿದ್ದೇನೆ. ರೋಹಿತ್‌ 10 ವರ್ಷಗಳಿಂದ (12 ವರ್ಷ) ಆಡುತ್ತಿದ್ದಾರೆ. ನಮ್ಮ ನಡುವೆ ಯಾವುದೇ ಸಮಸ್ಯೆಯಿಲ್ಲ. ಆಟಗಾರರ ನಡುವೆ ಸಮಸ್ಯೆ ಇದ್ದಿದ್ದರೆ ತಂಡ ಈ ಮಟ್ಟದ ಯಶಸ್ಸು ಕಾಣಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಕೊಹ್ಲಿ vs ರೋಹಿತ್ ಕೋಲ್ಡ್ ವಾರ್; BCCI ಮನವಿ ತಿರಸ್ಕರಿಸಿದ ಕ್ರಿಕೆಟರ್ಸ್!

ಶಾಸ್ತ್ರಿ ಪರ ಕೊಹ್ಲಿ ಬ್ಯಾಟಿಂಗ್‌: ಭಾರತ ತಂಡಕ್ಕೆ ನೂತನ ಕೋಚ್‌ ಹುಡುಕುತ್ತಿರುವ ಬಿಸಿಸಿಐ ತಮ್ಮನ್ನು ಸಂಪರ್ಕಿಸಿಲ್ಲ. ಕೋಚ್‌ ಆಯ್ಕೆ ಬಗ್ಗೆ ಸಲಹೆ ಕೇಳಿಲ್ಲ ಎಂದು ಸ್ಪಷ್ಟಪಡಿಸಿರುವ ಕೊಹ್ಲಿ, ರವಿ ಶಾಸ್ತ್ರಿ ಮಾರ್ಗದರ್ಶನದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿದೆ. ಅವರೇ ಕೋಚ್‌ ಆಗಿ ಮುಂದುವರಿದರೆ ಸಂತೋಷ ಎಂದಿದ್ದಾರೆ.