ಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವಕಾಶವಂಚಿತರಾದ ಕುರಿತ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿದ ಶರ್ಮಾ, 'ನಾನೀಗ ಕೇವಲ ಏಕದಿನ ಪಂದ್ಯಗಳ ಕುರಿತು ಯೋಚನೆ ಮಾಡುತ್ತಿದ್ದೇನೆ' ಎಂದು ಉತ್ತರಿಸಿದ್ದಾರೆ.

ಕೊಲಂಬೋ(ಆ.18): ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಮುಕ್ತಾಯವಾಗಿದೆ. ಇನ್ನು ಅದರ ಬಗ್ಗೆಯೇ ಮಾತನಾಡುವುದು ಸರಿಯಲ್ಲ. ಮುಂಬರುವ ಏಕದಿನ ಹಾಗೂ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡದಲ್ಲಿ ಭದ್ರವಾಗಿ ಬೇರೂರುವತ್ತ ಗಮನಹರಿಸಲಿದ್ದೇನೆ ಎಂದು ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವಕಾಶವಂಚಿತರಾದ ಕುರಿತ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿದ ಶರ್ಮಾ, 'ನಾನೀಗ ಕೇವಲ ಏಕದಿನ ಪಂದ್ಯಗಳ ಕುರಿತು ಯೋಚನೆ ಮಾಡುತ್ತಿದ್ದೇನೆ' ಎಂದು ಉತ್ತರಿಸಿದ್ದಾರೆ.

ಯಾವ ಆಟಗಾರ ಕೂಡ ಆಡುವ ಹನ್ನೊಂದರ ಬಳಗದಿಂದ ಹೊರಗಿರಲು ಬಯಸುವುದಿಲ್ಲ. ಅಂದರೆ ಬೆಂಚ್ ಕಾಯಲು ಇಷ್ಟಪಡುವುದಿಲ್ಲ. ಆದರೆ ತಂಡದ ಯೋಜನೆಗಳು, ನಾಯಕ ಹಾಗೂ ಕೋಚ್ ಅವರ ಆಲೋಚನೆಗಳ ಮೇಲೆ ಎಲ್ಲವೂ ನಿರ್ಧಾರವಾಗಲಿದೆ' ಎಂದು ಹೇಳಿದ್ದಾರೆ.