ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗದ ರೋಹಿತ್ ಶರ್ಮಾ, ಇದೀಗ ವಿಶ್ರಾಂತಿ ಮೂಡ್‌ಗೆ ಜಾರಿದ್ದಾರೆ. ರಿಲ್ಯಾಕ್ಸ್‌ಗಾಗಿ ರೋಹಿತ್ ಶರ್ಮಾ ಹಾಗೂ ಪತ್ನಿ ಜೆಕ್ ಗಣರಾಜ್ಯಕ್ಕೆ ತೆರಳಿದ್ದಾರೆ. ರೋಹಿತ್ ಶರ್ಮಾ ರಿಲ್ಯಾಕ್ಸೇಶನ್ ಹೇಗಿದೆ? ಇಲ್ಲಿದೆ.

ಪ್ರಾಗ್ವೆ(ಜು.23): ಇಂಗ್ಲೆಂಡ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿ ಮುಗಿಸಿದ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಇದೀಗ ಜೆಕ್ ಗಣರಾಜ್ಯಕ್ಕೆ ತೆರಳಿದ್ದಾರೆ. ಸಿಕ್ಕಿರೋ ವಿಶ್ರಾಂತಿ ಸಮಯದಲ್ಲಿ ಇಲ್ಲಿನ ರಾಜಧಾನಿ ಪ್ರಾಗ್ವೆಯಲ್ಲಿ ರೋಹಿತ್ ಹಾಗೂ ಪತ್ನಿ ರಿತಿಕ ಸಜ್ದೆ ಕಾಲ ಕಳೆಯುತ್ತಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಸದಸ್ಯನಾಗಿದ್ದ ರೋಹಿತ್ ಶರ್ಮಾ, ಆರಂಭಿಕ 3 ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿಲ್ಲ. ಹೀಗಾಗಿ ರೋಹಿತ್ ಶರ್ಮಾ ಹಾಗೂ ಪತ್ನಿ ಇದೀಗ ಪ್ರಾಗ್ವೆ ನಗರದಲ್ಲಿ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ.

View post on Instagram

ರೋಹಿತ್ ತಮ್ಮ ಪ್ರಾಗ್ವೆ ಪ್ರವಾಸ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಟೆಸ್ಟ್ ಸರಣಿಗೆ ಆಯ್ಕೆಯಾಗದ ರೋಹಿತ್ ಶರ್ಮಾ, ಮುಂಬೈ ಕ್ರಿಕೆಟ್ ಸಂಸ್ಥೆ ಆಯೋಜಿಸಿರುವ ಕ್ಯಾಂಪ್‌ನಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ಕ್ಯಾಂಪ್ ಆರಂಭಕ್ಕೂ ಮುನ್ನ ರಿಲ್ಯಾಕ್ಸ್‌ಗಾಗಿ ರೋಹಿತ್ ಹಾಗೂ ಪತ್ನಿ ಪ್ರಾಗ್ವೆನಲ್ಲಿ ಬೀಡುಬಿಟ್ಟಿದ್ದಾರೆ.


View post on Instagram