ಮುಂಬೈ(ಏ.12): ಅಭ್ಯಾಸದ ವೇಳೆ ಇಂಜುರಿಗೆ ತುತ್ತಾದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಕಳೆದ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ರೋಹಿತ್ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಶನಿವಾರ(ಏ.13)ರಂದು ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ರೋಹಿತ್ ಶರ್ಮಾ ಲಭ್ಯರಿದ್ದಾರೆ.

ಇದನ್ನೂ ಓದಿ: ಸಿಕ್ಸರ್ ಬಾರಿಸಿದ ಜಡೇಜಾ ತಲೆ ಮೇಲೆ ಹೊಡೆದ ಧೋನಿ!

ತವರಿನಲ್ಲಿ ಮುಂಬೈ ಇಂಡಿಯನ್ಸ್ ರಾಜಸ್ಥಾನ ರಾಯಲ್ಸ್ ವಿರುದ್ದ ಹೋರಾಟ ನಡೆಸಲಿದೆ. ಗಾಯದಿಂದ ಗುಣಮುಖರಾಗಿರುವ ರೋಹಿತ್ ಶರ್ಮಾ, ರಾಜಸ್ತಾನ ವಿರುದ್ದದ ಪಂದ್ಯಕ್ಕೆ ಲಭ್ಯರಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ತಂಡದ ಕ್ರಿಕೆಟ್ ಆಪರೇಶನ್ ನಿರ್ದೇಶಕ ಜಹೀರ್ ಖಾನ್ ಹೇಳಿದ್ದಾರೆ. 

ಇದನ್ನೂ ಓದಿ: ಗೆಲುವಿಗಾಗಿ RCB ಹೊಸ ತಂತ್ರ- ತಂಡ ಸೇರಿಕೊಂಡ ಸ್ಟಾರ್ ಕ್ರಿಕೆಟಿಗ!

ಇಂಜುರಿ ಕಾರಣದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯಕ್ಕೆ ರೋಹಿತ್ ಅಲಭ್ಯರಾಗಿದ್ದರು. ಹೀಗಾಗಿ ಕೀರನ್ ಪೊಲಾರ್ಡ್ ತಂಡದ ನಾಯಕತ್ವ ವಹಿಸಿದ್ದರು. ಈ ಪಂದ್ಯದಲ್ಲಿ ಪೊಲಾರ್ಡ್ ಏಕಾಂಗಿ ಹೋರಾಟ ನೀಡಿದ ಪಂದ್ಯ ಗೆಲ್ಲಿಸಿಕೊಟ್ಟಿದ್ದರು. ಇದೀಗ ರೋಹಿತ್ ಆಗಮನದಿಂದ ತಂಡ  ಮತ್ತಷ್ಟು ಬಲಿಷ್ಠವಾಗಿದೆ.