ಆಸ್ಟ್ರೇಲಿಯಾ ಮ್ಯಾಟ್ ರೇಯ್ಡ್ ಹಾಗೂ ಜಾನ್ ಪ್ಯಾಟ್ರಿಕ್ ಸ್ಮಿತ್ ಜೋಡಿಯನ್ನು 4-6, 6-3, 12-10 ಸೆಟ್‌'ಗಳಿಂದ ಮಣಿಸಿದ ಪೇಸ್ ಜೋಡಿ ಮುಂದಿನ ಹಂತ ಪ್ರವೇಶಿಸಿತು.

ಗ್ರೇಟ್ ಬ್ರಿಟನ್(ಜೂ.21): ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಹಾಗೂ ಕೆನಾಡದ ಶಂಸುದ್ದೀನ್ ಜೋಡಿ ಏಗೊನ್ ಎಟಿಪಿ ಚಾಲೆಂಜರ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಭಾರತದ ಮತ್ತೊಂದು ಜೋಡಿಯಾದ ಪೂರವ್ ರಾಜಾ ಹಾಗೂ ದಿವಿಜ್ ಶರಣ್ ಕೂಡಾ ಅಂತಿಮ ಎಂಟರ ಘಟ್ಟಕೇರಿದ್ದಾರೆ.

Add Asianetnews Kannada as a Preferred SourcegooglePreferred

ಆಸ್ಟ್ರೇಲಿಯಾ ಮ್ಯಾಟ್ ರೇಯ್ಡ್ ಹಾಗೂ ಜಾನ್ ಪ್ಯಾಟ್ರಿಕ್ ಸ್ಮಿತ್ ಜೋಡಿಯನ್ನು 4-6, 6-3, 12-10 ಸೆಟ್‌'ಗಳಿಂದ ಮಣಿಸಿದ ಪೇಸ್ ಜೋಡಿ ಮುಂದಿನ ಹಂತ ಪ್ರವೇಶಿಸಿತು. ಇನ್ನು ಪೂರವ್ ರಾಜಾ ಜೋಡಿ, ಡೊಮಿನಿಕ್ ಗಣರಾಜ್ಯದ ವಿಕ್ಟರ್ ಎಸ್ಟ್ರೆಲ್ಲಾ ಬರ್ಗೊಸ್ ಹಾಗೂ ಬಾರ್ಬಡೋಸ್‌ನ ಡೇರಿಯನ್ ಕಿಂಗ್ ಜೋಡಿ ವಿರುದ್ಧ 6-2, 6-4 ಸೆಟ್‌'ಗಳ ಅಂತರದ ಗೆಲುವು ಸಾಧಿಸಿತು.

ಬೋಪಣ್ಣ ಜೋಡಿಗೆ ಗೆಲುವು:

ಲಂಡನ್‌'ನಲ್ಲಿ ನಡೆಯುತ್ತಿರುವ ಎಟಿಪಿ500 ಏಗೊನ್ ಚಾಂಪಿಯನ್‌'ಶಿಪ್‌'ನ ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಇತ್ತೀಚೆಗಷ್ಟೇ ಫ್ರೆಂಚ್‌ ಓಪನ್ ಗೆದ್ದಿದ್ದ ಭಾರತದ ರೋಹನ್ ಬೋಪಣ್ಣ ಹಾಗೂ ಕ್ರೊಯೇಷ್ಯಾದ ಇವಾನ್ ಡಾಡಿಗ್ ಜೋಡಿ, ದಕ್ಷಿಣ ಆಫ್ರಿಕಾದ ಕ್ಲೈ ಎಡ್ಮಂಡ್ ಹಾಗೂ ಆಸ್ಟ್ರೇಲಿಯಾದ ಥಾನಾಸಿ ಕೊಕ್ನಿಕಕಿಸ್ ಜೋಡಿಯನ್ನು 6-3, 6-7(5), 10-7 ಸೆಟ್‌'ಗಳಿಂದ ಮಣಿಸುವ ಮೂಲಕ ಶುಭಾರಂಭ ಮಾಡಿತು.