ಫೈನಲ್ ಪಂದ್ಯದಲ್ಲಿ ರೋಹನ್-ಗ್ಯಾಬ್ರಿಯೆಲಾ, ಕೊಲೊಂಬಿಯಾದ ರಾಬರ್ಟ್ ರಾಹ್ ಹಾಗೂ ಜರ್ಮನಿಯ ಆ್ಯನಾ ಗ್ರೊನೆಲ್ಡ್ ಜೋಡಿ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದೆ.
ಪ್ಯಾರಿಸ್(ಜೂ.07): ಭಾರತದ ಅನುಭವಿ ಆಟಗಾರ ರೋಹನ್ ಬೋಪಣ್ಣ ಹಾಗೂ ಕೆನಡಾದ ಗ್ಯಾಬ್ರಿಯೆಲಾ ದಬ್ರೌಸ್ಕಿ ಜೋಡಿ ಫ್ರೆಂಚ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಫೈನಲ್'ಗೆ ಲಗ್ಗೆಯಿಟ್ಟಿದೆ.
ಮಿಶ್ರ ಡಬಲ್ಸ್ ವಿಭಾಗದ ಸೆಮಿಫೈನಲ್'ನಲ್ಲಿ 3ನೇ ಶ್ರೇಯಾಂಕಿತ ಜೋಡಿಯಾದ ಜೆಕ್ ಗಣರಾಜ್ಯದ ಆ್ಯಂಡ್ರೆಯಾ ಹ್ಲವಕೊವಾ ಹಾಗೂ ಫ್ರಾನ್ಸ್'ನ ರೋಜರ್ ವ್ಯಾಸಲಿನ್ ವಿರುದ್ಧ ಗೆದ್ದ ಭಾರತದ ಬೋಪಣ್ಣ-ದಬ್ರೌಸ್ಕಿ ಜೋಡಿ ಭರ್ಜರಿಯಾಟವಾಡುವ ಮೂಲಕ ಪ್ರಶಸ್ತಿ ಹಂತ ತಲುಪಿದೆ.
7ನೇ ಶ್ರೇಯಾಂಕಿತ ಭಾರತ-ಕೆನಡಾ ಜೋಡಿ, 7-5, 6-3 ನೇರ ಸೆಟ್'ಗಳ ಅಂತರದಲ್ಲಿ ಸುಲಭ ಗೆಲುವು ದಾಖಲಿಸಿತು.
ನಾಳೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರೋಹನ್-ಗ್ಯಾಬ್ರಿಯೆಲಾ, ಕೊಲೊಂಬಿಯಾದ ರಾಬರ್ಟ್ ರಾಹ್ ಹಾಗೂ ಜರ್ಮನಿಯ ಆ್ಯನಾ ಗ್ರೊನೆಲ್ಡ್ ಜೋಡಿ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದೆ.
