ಟೆನಿಸ್ ದಿಗ್ಗಜ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್‌ಗೆ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನ ನೀಡಲಾಗಿದೆ. ಟೆನಿಸ್ ಪಟುಗೆ, ಕ್ರಿಕೆಟ್ ರ‍್ಯಾಂಕಿಂಗ್ ಹೇಗೆ ಬಂತು? ಇಲ್ಲಿದೆ ವಿವರ.

ದುಬೈ(ಜು.10): ಟೆನಿಸ್ ದಿಗ್ಗಜ ರೋಜರ್ ಫೆಡರರ್, ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿ ಪಂದ್ಯದಲ್ಲಿ ಕ್ರಿಕೆಟ್ ಶೈಲಿಯಲ್ಲಿ ರಾಕೆಟ್ ಬೀಸಿ ಬಾರಿ ಸದ್ದು ಮಾಡಿದ್ದರು. ಎದುರಾಳಿ ಎಡ್ರಿಯನ್ ಮುನ್ನಾರಿನೋ ಬಾರಿಸಿದ ಚೆಂಡನ್ನ ರೋಜರ್ ಫೆಡರರ್ ಕ್ರಿಕೆಟ್‌ನಲ್ಲಿ ಡಿಫೆನ್ಸ್ ಶಾಟ್ ರೀತಿಯಲ್ಲೇ ಫೆಡರರ್ ರಾಕೆಟ್ ಬೀಸಿದ್ದಾರೆ.

Ratings for @rogerfederer's forward defence, @ICC?#Wimbledonpic.twitter.com/VVAt2wHPa4

Scroll to load tweet…

ರೋಜರ್ ಫೆಡರರ್ ಟೆನಿಸ್ ಕೋರ್ಟ್‌ನಲ್ಲಿ ಮಾಡಿದ ಬ್ಯಾಟಿಂಗ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನ ನೀಡಿದೆ.

*sigh* ok... 👇 pic.twitter.com/KXnhaznxL8

Scroll to load tweet…

ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ ಇದರಲ್ಲಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳಲ್ಲಿ ರೋಜರ್ ಫೆಡರರ್‌ಗೆ ಮೊದಲ ಸ್ಥಾನ ನೀಡಲಾಗಿದೆ. ಈ ಮೂಲಕ ಐಸಿಸಿ ಟೆನಿಸ್ ದಿಗ್ಗಜನಿಗೆ ಗೌರವ ನೀಡಿದೆ.

ಇದನ್ನು ಓದಿ: ಟೆನಿಸ್ ಅಂಕಣದಲ್ಲಿ ಕ್ರಿಕೆಟ್ ಆಡಿದ ಫೆಡರರ್..! ವಿಡಿಯೋ ವೈರಲ್..!