ಕೆಲವೇ ನಿಮಿಷಗಳಲ್ಲಿ ಫೆಡರರ್ ಕ್ರಿಕೆಟ್ ಶಾಟ್ ವಿಡಿಯೋ ಟ್ವೀಟರ್‌ನಲ್ಲಿ ಅಪ್‌ಲೋಡ್ ಆಯಿತು. ವಿಶ್ವದ ಶ್ರೇಷ್ಠ ಟೆನಿಸಿಗ ಕ್ರಿಕೆಟ್ ಕಲೆ ಪ್ರದರ್ಶಿಸಿದ್ದನ್ನು ಅಭಿಮಾನಿಗಳು ಕೊಂಡಾಡಿದರು.
ಲಂಡನ್[ಜು.10]: ವಿಶ್ವ ನಂ.2 ರೋಜರ್ ಫೆಡರರ್ ಸೋಮವಾರ ವಿಂಬಲ್ಡನ್ ಅಂಕಣದಲ್ಲಿ ಕ್ರಿಕೆಟ್ ಕಲೆ ಪ್ರದರ್ಶಿಸಿದರು. ಎದುರಾಳಿ ಏಡ್ರಿಯನ್ ಬಾರಿಸಿದ ಚೆಂಡನ್ನು ಫೆಡರರ್, ಕ್ರಿಕೆಟ್‌ನಲ್ಲಿ ಡಿಫೆಂಡ್ ಮಾಡುವ ರೀತಿಯಲ್ಲಿ ಹೊಡೆದಿದ್ದು ನೆರೆದಿದ್ದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.
ಕೆಲವೇ ನಿಮಿಷಗಳಲ್ಲಿ ಫೆಡರರ್ ಕ್ರಿಕೆಟ್ ಶಾಟ್ ವಿಡಿಯೋ ಟ್ವೀಟರ್‌ನಲ್ಲಿ ಅಪ್‌ಲೋಡ್ ಆಯಿತು. ವಿಶ್ವದ ಶ್ರೇಷ್ಠ ಟೆನಿಸಿಗ ಕ್ರಿಕೆಟ್ ಕಲೆ ಪ್ರದರ್ಶಿಸಿದ್ದನ್ನು ಅಭಿಮಾನಿಗಳು ಕೊಂಡಾಡಿದರು. ಫೆಡರರ್, ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ಭಾರತ ತಂಡದ ನಾಯಕ ಕೊಹ್ಲಿ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ರೋಜರ್ ಫೆಡಡರ್ ಇದೀಗ ಎಂಟರ ಘಟ್ಟದಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್’ಸನ್ ಅವರನ್ನು ಎದುರಿಸಲಿದ್ದಾರೆ.
