'ನಿಮ್ಮ ಅಭಿಮಾನಿ..' ರಾಫೆಲ್‌ ನಡಾಲ್‌ ನಿವೃತ್ತಿಗೆ ಭಾವುಕ ಪತ್ರ ಬರೆದ ರೋಜರ್‌ ಫೆಡರರ್!

ಸ್ಪೇನ್‌ ಹಾಗೂ ನೆದರ್ಲೆಂಡ್ಸ್‌ ನಡುವಿನ ಡೇವಿಸ್‌ ಕಪ್‌ ಫೈನಲ್‌ ಪಂದ್ಯ ಮಂಗಳವಾರದಿಂದ ಆರಂಭವಾಗಲಿದೆ. ಡೇವಿಸ್‌ ಕಪ್‌ ಫೈನಲ್ಸ್ ಅನ್ನೋದಕ್ಕಿಂತ ಟೆನಿಸ್‌ ದಿಗ್ಗಜ ರಾಫೆಲ್‌ ನಡಾಲ್‌ ಅವರ ವಿದಾಯದ ಟೂರ್ನಮೆಂಟ್‌ ಆಗಿರುವ ಕಾರಣಕ್ಕೆ ಫೈನಲ್ಸ್‌ ವಿಶೇಷತೆ ಪಡೆದಿದೆ.

Roger Federer Pens Emotional Note For Retiring Rafael Nadal san

ಕ್ರೀಡಾ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ವ್ಯಕ್ತಿ ರಾಫೆಲ್‌ ನಡಾಲ್‌ ವಿದಾಯದ ಟೂರ್ನಿ ಆಡುತ್ತಿದ್ದಾರೆ. ತಮ್ಮ ದಿಗ್ಗಜ ಸ್ಥಾನಕ್ಕೇರಿಸಿದ ಟೆನಿಸ್‌ ಕೋರ್ಟ್‌ಅನ್ನು ಅವರು ಶಾಶ್ವತವಾಗಿ ತೊರೆಯಲಿದ್ದಾರೆ. ಫ್ರೆಂಚ್‌ ಓಪನ್‌ ಕೋರ್ಟ್‌ಅನ್ನು ತಮ್ಮ ಕೋಟೆ ಎನ್ನುವಂತೆ ಜಗತ್ತಿಗೆ ತೋರಿಸಿದ್ದ ರಾಫೆಲ್‌ ನಡಾಲ್‌ 2024ರ ಡೇವಿಸ್‌ ಕಪ್‌ ಫೈನಲ್ಸ್‌ನೊಂದಿಗೆ ತಮ್ಮ ವರ್ಣರಂಜಿತ ಕ್ರೀಡಾ ಜೀವನಕ್ಕೆ ಶಾಸ್ವತವಾಗಿ ಗುಡ್‌ಬೈ ಹೇಳುತ್ತಿದ್ದಾರೆ. ವೃತ್ತಿಪರ ಟೆನಿಸ್‌ ಆಟಗಾರನಾಗಿ ರಾಫೆಲ್‌ ನಡಾಲ್‌ ಕೊನೆಯ ಬಾರಿಗೆ ಟೆನಿಸ್‌ ಕೋರ್ಟ್‌ಗೆ ರಾಕೆಟ್‌ ಹಿಡಿದು ಇಳಿಯಲಿದ್ದಾರೆ. ಈ ವೇಳೆ ಇಡೀ ಕ್ರೀಡಾ ಜಗತ್ತು ಭಾವುಕವಾಗಿದೆ. ಅಭಿಮಾನಿಗಳು ಮಾತ್ರವಲ್ಲ ಕ್ರೀಡೆಯ ಹಾಲಿ ಹಾಗೂ ಮಾಜಿ ಆಟಗಾರರು ನಡಾಲ್‌ರನ್ನು ಮಿಸ್‌ ಮಾಡಿಕೊಳ್ಳುವ ನಿಟ್ಟಿನಲ್ಲಿ ಭಾವುಕವಾಗಿ ಪೋಸ್ಟ್‌ ಮಾಡಿದ್ದಾರೆ. ಟೆನಿಸ್‌ ಕೋರ್ಟ್‌ನಲ್ಲಿ ರಾಫೆಲ್‌ ನಡಾಲ್‌ರ ಪರಮ ಎದುರಾಳಿಗಳು ಕೂಡ ಅವರ ನಿವೃತ್ತಿಯಿಂದ ಭಾವುಕರಾಗಿದ್ದಾರೆ. ಕ್ರೀಡಾ ಜೀವನದ ಉದ್ದಕ್ಕೂ ತಾವು ಎದುರಿಸಿದ ಅತ್ಯಂತ ಪ್ರಬಲ ಎದುರಾಳಿಯ ಬಗ್ಗೆ ರೋಜರ್‌ ಫೆಡರರ್‌ ಭಾವುಕ ಪತ್ರವನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅಂದಾಜು 600 ಶಬ್ದಗಳ ಪತ್ರದಲ್ಲಿ ರೋಜರ್‌ ಫೆಡರರ್‌ 38 ವರ್ಷದ ರಾಫೆಲ್‌ ನಡಾಲ್‌ ಅವರನ್ನು ಟೆನಿಸ್‌ ಕೋರ್ಟ್‌ನಲ್ಲಿ ಮೊದಲ ಬಾರಿಗೆ ಎದುರಿಸಿದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಮಲ್ಲೋರ್ಕಾದ ಹುಡುಗನೊಬ್ಬ ಅವೆ ಮಣ್ಣಿನ ಅಂಕಣದ ರಾಜನಾಗಿ ಬೆಳೆದಿದ್ದನ್ನು ಭಾವುಕವಾಗಿ ತಿಳಿಸಿದ್ದಾರೆ.

ಲೆಟ್ಸ್‌ ಗೋ ರಾಫೆಲ್‌ ನಡಾಲ್‌,

ಟೆನಿಸ್‌ನಿಂದ ನೀವು ಗ್ರಾಜುಯೇಟ್‌ ಆಗೋಕೆ ರೆಡಿಯಾಗುತ್ತಿದ್ದೀರಿ. ನಾನು ಭಾವುಕನಾಗುವ ಮುನ್ನ ಕೆಲವೊಂದು ವಿಚಾರಗಳನ್ನು ನಾನಿಲ್ಲಿ ಹೇಳಿಕೊಳ್ಳಬೇಕಿದೆ.

ಸ್ಪಷ್ಟವಾಗಿ ಪ್ರಾರಂಭಿಸೋಣ: ನೀವು ನನ್ನನ್ನು ತುಂಬಾ ಸೋಲಿಸಿದ್ದೀರಿ, ನಾನು ನಿಮ್ಮನ್ನು ಸೋಲಿಸಿದಕ್ಕಿಂತ ಹೆಚ್ಚಾಗಿ. ಬೇರೆ ಯಾರೂ ನನಗೆ ಸವಾಲು ನೀಡದ ರೀತಿಯಲ್ಲಿ ನೀನು ನನಗೆ ಸವಾಲು ನೀಡಿದ್ದೀರಿ. ಅವೆ ಮಣ್ಣಿನ ಅಂಕಣದಲ್ಲಿ ಆಡುವಾಗ, ನಿಮ್ಮ ಕೋಟೆಯೊಳಗೆ ಕಾಲಿಡುತ್ತಿದ್ದೇನೆ ಎಂದೇ ನನಗೆ ಅನಿಸುತ್ತಿತ್ತು. ಕೋರ್ಟ್‌ನಲ್ಲಿ ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಾಗಿ ಕಷ್ಟಪಡುವಂತೆ ಮಾಡಿದ್ದೀರಿ. ಎಲ್ಲಿಯತನಕ ಎಂದರೆ, ನನ್ನ ಆಟದ ಬಗ್ಗೆ ನಾನೇ ಯೋಚನೆ ಮಾಡುವಷ್ಟರ ಮಟ್ಟಿಗೆ. ನಿಮ್ಮ ವಿರುದ್ಧ ಆಡುವಾಗ ಕೊಂಚವೂ ಕೂಡ ಲೋಪವಾಗಬಾರದು ಎನ್ನುವ ಕಾರಣಕ್ಕೆ ನಾನು ನನ್ನ ರಾಕೆಟ್‌ನ ಹೆಡ್‌ನ ಸೈಜ್‌ ಕೂಡ ಬದಲಿಸುವಷ್ಟರ ಮಟ್ಟಿಗೆ ಹೋಗಿದ್ದೆ.

ಹಾಗಂತ ನಾನೇನು ತುಂಬಾ ಮೂಢನಂಬಿಕೆಯ ವ್ಯಕ್ತಿಯಲ್ಲ. ಆದರೆ, ನೀವು ಈ ಮೂಡನಂಬಿಕೆಗಳನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದೀರಿ. ಆಡುವ ಮುನ್ನ ನಿಮ್ಮ ಸಂಪೂರ್ಣ ಪ್ರಕ್ರಿಯೆಗೆ ಇದೇ ಆಧಾರವಾಗಿತ್ತು. ನಿಮ್ಮೆಲ್ಲಾ ಆಚರಣೆಗಳು. ಆಡುವ ಮುನ್ನ ಆಟಿಕೆ ಸೈನಿಕರಂತೆ ನಿಮ್ಮ ನೀರಿನ ಬಾಟಲಿಗಳನ್ನು ಜೋಡಿಸಿಡುವುದು, ಕೂದಲನ್ನು ಸರಿಪಡಿಸಿಕೊಳ್ಳುವ ರೀತಿ, ಅಂಡರ್‌ವೇರ್‌ಅನ್ನು ಪ್ರತಿ ಬಾರಿ ಅಡ್ಜಸ್ಟ್‌ ಮಾಿಕೊಳ್ಳುವುದು. ಇದೆಲ್ಲವನ್ನೂ ನೀವು ಕಟ್ಟುನಿಟ್ಟಾಗಿ ಮಾಡಿದ್ದೀತಿ. ರಹಸ್ಯವಾಗಿ ನಾನು ನಿಮ್ಮ ಈ ಸಂಪೂರ್ ವಿಚಾರವನ್ನು ಇಷ್ಟಪಟ್ಟಿದ್ದೆ. ಏಕೆಂದರೆ, ಇದು ತುಂಬಾ ವಿಶಿಷ್ಟವಾಗಿತ್ತು ಹಾಗೂ ಅದನ್ನು ಮಾಡುತ್ತಿದ್ದದ್ದು ನೀವಾಗಿತ್ತು.

ನಿಮಗೊಂದು ವಿಚಾರ ಗೊತ್ತಾ ರಾಫಾ, ಟೆನಿಸ್‌ನಲ್ಲಿ ಇನ್ನಷ್ಟು ಹೆಚ್ಚು ತೀವ್ರವಾಗಿ ನಾನು ಇಷ್ಟಪಡೋದಕ್ಕೆ ಕಾರಣವಾಗಿದ್ದೇ ನೀವು. ಒಕೆ, ಬಹುಶಃ ಇದೇನು ಮೊದಲಲ್ಲ. 2004ರ ಆಸ್ಟ್ರೇಲಿಯನ್‌ ಓಪನ್‌ ಬಳಿಕ ನಾನು ಟೆನಿಸ್‌ನಲ್ಲಿ ಮೊದಲ ಬಾರಿಗೆ ನಂ.1 ಶ್ರೇಯಾಂಕಕ್ಕೆ ಏರಿದ್ದೆ. ಈ ವೇಳೆ ನಾನು ಪ್ರಪಂಚದ ತುತ್ತತುದಿಯಲ್ಲಿದ್ದೇನೆ ಎಂದು ಭಾವಿಸಿದ್ದೆ. ಆದರೆ, ಇದಾಗಿ ಎರಡು ತಿಂಗಳ ನಂತರ. ಮಿಯಾಮಿ ಕೋರ್ಟ್‌ನಲ್ಲಿ ಕೆಂಪು ಬಣ್ಣದ ತೋಳುಗಳಿಲ್ಲದ ಶರ್ಟ್‌ ತೊಟ್ಟು, ಬೈಸೆಪ್ಸ್‌ಗಳನ್ನು ತೋರಿಸುತ್ತಾ ನೀವು ಬಂದಿರಿ. ಬಹಳ ಸುಲಭವಾಗಿ ನನ್ನನ್ನು ಸೋಲಿಸಿದಿರಿ.ಮಲ್ಲೋರ್ಕಾದ ಈ ಅದ್ಬುತ ಯುವ ಆಟಗಾರನ ಬಗ್ಗೆ ಈ ಪೀಳಿಗೆಯ ಪ್ರತಿಭೆ, ಬಹುಶಃ ಒಂದು ದಿನ ಮೇಜರ್‌ ಗೆಲ್ಲುತ್ತಾನೆ ಎನ್ನುವಂಥ ಮಾತುಗಳನ್ನು ನಿಮ್ಮ ಬಗ್ಗೆ ನಾನು ಕೇಳುತ್ತಿದ್ದ ಮಾತುಗಳು ಅತಿಶಯೋಕ್ತಿಯಾಗಿರಲಿಲ್ಲ ಅನ್ನೋದು ಗೊತ್ತಾಯಿತು.

ನಾವಿಬ್ಬರೂ ನಮ್ಮ ಪ್ರಯಾಣದ ಆರಂಭದಲ್ಲಿದ್ದೆವು. ಕೊನೆಗೆ ಇಬ್ಬರೂ ಜೊತೆಯಲ್ಲಿ ಮಾತನಾಡಲು ಆರಂಭಿಸಿದೆವು.20 ವರ್ಷಗಳ ನಂತರ, ರಾಫಾ ನಾನು ಈಗ ಹೇಳಲೇಬೇಕಿದೆ: ನೀವು ಎಂತಹ ಅಸಾಧ್ಯ ಪ್ರಯಾಣ ಮಾಡಿದ್ದೀರಿ. 14 ಫ್ರೆಂಚ್ ಓಪನ್-ಐತಿಹಾಸಿಕ ಗೆಲುವುಗಳು. ನೀವು ಸ್ಪೇನ್‌ಗೆ ಹೆಮ್ಮೆ ತಂದಿದ್ದೀರಿ... ಇಡೀ ಟೆನಿಸ್ ಜಗತ್ತಿಗೆ ಹೆಮ್ಮೆ ತಂದಿದ್ದೀರಿ.

ನಾವು ಹಂಚಿಕೊಂಡ ನೆನಪುಗಳ ಬಗ್ಗೆ ನಾನು ಯೋಚಿಸುತ್ತಲೇ ಇರುತ್ತೇನೆ. ಒಟ್ಟಾಗಿ ಕ್ರೀಡೆಯನ್ನು ಉತ್ತೇಜಿಸಿದ ಕ್ಷಣವನ್ನು ನೆನಪಿಸಿಕೊಳ್ಳುತ್ತೇನೆ. ಆ ಪಂದ್ಯವನ್ನು ಅರ್ಧ ಹುಲ್ಲು, ಅರ್ಧ ಮಣ್ಣಿನ ಮೇಲೆ ಆಡುವುದು. ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ 50,000 ಕ್ಕೂ ಹೆಚ್ಚು ಅಭಿಮಾನಿಗಳ ಮುಂದೆ ಆಡುವ ಮೂಲಕ ಸಾರ್ವಕಾಲಿಕ ಹಾಜರಾತಿ ದಾಖಲೆಯನ್ನು ಮುರಿದಿದ್ದು, ಅಂಕಣದಲ್ಲಿ ಒಬ್ಬರನ್ನೊಬ್ಬರು ಎದುರಾಳಿಯಾಗಿ ಹೋರಾಟ ಮಾಡುವುದು, ಟ್ರೋಫಿ ಸಮಾರಂಭದ ವೇಳೆ ಬಹುತೇಕ ಅಕ್ಷರಶಃ ಪರಸ್ಪರ ಜೊತೆಯಲ್ಲಿಯೇ ನಿಲ್ಲುವುದು.

2016ರಲ್ಲಿ ರಾಫೆಲ್‌ ನಡಾಲ್‌ ಅಕಾಡೆಮಿಯನ್ನು ಉದ್ಘಾಟನೆ ಮಾಡಲು ಮಲ್ಲೋರ್ಕಾಗೆ ನೀವು ಆಹ್ವಾನ ನೀಡಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ನಾನು ಅಲ್ಲಿರಬೇಕೆಂದು ಒತ್ತಾಯಿಸಲು ನೀವು ತುಂಬಾ ಪೊಲೈಟ್‌ ಆಗಿದ್ದೀರಿ ಎಂದು ನನಗೆ ತಿಳಿದಿತ್ತು, ಆದರೆ ನಾನು ಅದನ್ನು ಕಳೆದುಕೊಳ್ಳಲು ಬಯಸಲಿಲ್ಲ.ನೀವು ಯಾವಾಗಲೂ ಪ್ರಪಂಚದಾದ್ಯಂತದ ಮಕ್ಕಳಿಗೆ ಮಾದರಿಯಾಗಿದ್ದೀರಿ, ಮತ್ತು ಮಿರ್ಕಾ ಮತ್ತು ನಾನು ನಮ್ಮ ಮಕ್ಕಳು ನಿಮ್ಮ ಅಕಾಡೆಮಿಗಳಲ್ಲಿ ತರಬೇತಿ ಪಡೆದಿರುವುದಕ್ಕೆ ತುಂಬಾ ಸಂತೋಷವಾಗಿದೆ. ಅವರು ಅಲ್ಲಿ ಅದ್ಭುತ ದಿನ ಕಳೆದರು ಮತ್ತು ಸಾವಿರಾರು ಇತರ ಯುವ ಆಟಗಾರರಂತೆ ಕಲಿತರು. ನನ್ನ ಮಕ್ಕಳು ಲೆಫ್ಟೀಸ್ ಆಗಿ ಟೆನಿಸ್ ಆಡುತ್ತಾ ಮನೆಗೆ ಬರುತ್ತಾರೆ ಎಂದು ನಾನು ಯಾವಾಗಲೂ ಚಿಂತೆ ಮಾಡುತ್ತಿದ್ದೆ.

ಆ ಬಳಿಕ ಲಂಡನ್‌ನಲ್ಲಿ ನಡೆದ 2022ಲ್ಲಿ ಲೇವರ್‌ ಕಪ್‌. ನನ್ನ ಅಂತಿಮ ಪಂದ್ಯ.ನೀವು ನನ್ನ ಪಕ್ಕದಲ್ಲಿ ಇದ್ದೀರಿ ಎಂಬುದು ನನಗೆ ಎಲ್ಲವನ್ನೂ ಅರ್ಥೈಸಿತು-ನನ್ನ ಪ್ರತಿಸ್ಪರ್ಧಿಯಾಗಿ ಅಲ್ಲ ಆದರೆ ನನ್ನ ಡಬಲ್ಸ್ ಪಾಲುದಾರನಾಗಿ. ಆ ರಾತ್ರಿ ನಿಮ್ಮೊಂದಿಗೆ ಕೋರ್ಟ್‌  ಹಂಚಿಕೊಡಿದ್ದು ಮತ್ತು ಆ ಕಣ್ಣೀರನ್ನು ಹಂಚಿಕೊಳ್ಳುವುದು ನನ್ನ ವೃತ್ತಿಜೀವನದ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದಾಗಿದೆ.

ರಾಫಾ,ನನಗೆ ಗೊತ್ತು ನೀವು ಈಗ ನಿಮ್ಮ ಶ್ರೇಷ್ಠ ಕ್ರೀಡಾ ಜೀವನದ ಅತ್ಯಂತ ಕೊನೆಯ ಹಂತದಲ್ಲಿದ್ದೀರಿ ಹಾಗೂ ಅದರ ಬಗ್ಗೆ ಗಮನ ನೀಡಿದ್ದೀರಿ. ಈ ಪಂದ್ಯ ಮುಗಿದ ಬಳಿಕ ನಾವು ಮಾತನಾಡೋಣ. ಸದ್ಯಕ್ಕೆ, ನಿಮ್ಮ ಯಶಸ್ಸಿನಲ್ಲಿ ದೊಡ್ಡ ಪಾತ್ರವನ್ನು ವಹಿಸಿದ ನಿಮ್ಮ ಕುಟುಂಬ ಮತ್ತು ತಂಡವನ್ನು ನಾನು ಅಭಿನಂದಿಸಲು ಬಯಸುತ್ತೇನೆ.ಮತ್ತು ನಿಮ್ಮ ಹಳೆಯ ಸ್ನೇಹಿತ ಯಾವಾಗಲೂ ನಿಮಗಾಗಿ ಹುರಿದುಂಬಿಸುತ್ತಾನೆ ಮತ್ತು ನೀವು ಮುಂದೆ ಮಾಡುವ ಪ್ರತಿಯೊಂದಕ್ಕೂ ಇನ್ನಷ್ಟು ಹುರಿದುಂಬಿಸುತ್ತಾನೆ ಎಂದು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ.


ರಾಫಾ ಅದು!

ನಿಮ್ಮ ಅತ್ಯುತ್ತಮವ್ನೇ ಬಯಸುವ ಅಭಿಮಾನಿ,

ರೋಜರ್

ಇದನ್ನೂ ಓದಿ: Bengaluru: ಪ್ರಯಾಣಿಕರ ಎದುರು ಸ್ಟಾರ್ಟ್‌ಅಪ್‌ ಕನಸು ಬಿಚ್ಚಿಟ್ಟ ಬೆಂಗಳೂರಿನ ಆಟೋ ಡ್ರೈವರ್‌!

ಇದನ್ನೂ ಓದಿ: ಸ್ಟಾರ್ಟ್‌ಅಪ್‌ ಕನಸಿದ್ಯಾ? ಹಾಗಿದ್ರೆ OTT ಅಲ್ಲಿ ನೀವು ಮಿಸ್‌ ಮಾಡದೇ ಈ ಚಿತ್ರಗಳನ್ನ ನೋಡ್ಲೇಬೇಕು

 

Latest Videos
Follow Us:
Download App:
  • android
  • ios