ಮೆಲ್ಬರ್ನ್(ಜ.02): ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ವಿರುದ್ಧ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಸ್ಲೆಡ್ಜಿಂಗ್ ಮಾಡಿದ್ದರು. ಬ್ಯಾಟಿಂಗ್ ಮಾಡುತ್ತಿದ್ದ ಪಂತ್‌‌ನ್ನ ಕೆಣಕೋ ಮೂಲಕ ವಿಕೆಟ್ ಕಬಳಿಸೋ ತಂತ್ರಕ್ಕೆ ಮೊರೆಹೋಗಿದ್ದರು. ಆದರೆ ಪಂತ್ ಕಿಚಾಯಿಸಿದ ಪೈನ್ ಕೈಸುಟ್ಟುಕೊಂಡಿದ್ದಾರೆ.

ಇದನ್ನೂ ಓದಿ: 140 ಸೆಕೆಂಡ್‌ನಲ್ಲಿ 63 ಕೋಟಿ ಗೆದ್ದ ಫ್ಲಾಯ್ಡ್ ಮೇವೆದರ್

3ನೇ ಟೆಸ್ಟ್ ಪಂದ್ಯದ ವೇಳೆ ಟಿಮ್ ಪೈನ್, ನಾನು ನನ್ನ ಹೆಂಡತಿ ಸಿನಿಮಾಗೆ ಹೋಗುತ್ತೇವೆ ನಮ್ಮ ಮಕ್ಕಳನ್ನ ನೋಡಿಕೊಳ್ಳತ್ತಿಯಾ ಎಂದು ಕಿಚಾಯಿಸಿದ್ದರು. ಪಂದ್ಯದ ಬಳಿಕ ರಿಷಬ್ ಪಂತ್, ನೇರವಾಗಿ ಟಿಮ್ ಪೈನ್ ಮನೆಗೆ ತೆರಳಿ, ಮಕ್ಕಳು ಹಾಗೂ ಪೈನ್ ಪತ್ನಿಯೊಂದಿಗೆ ಪೋಟೋ ತೆಗೆಸಿಕೊಂಡಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾ ಕ್ರಿಕೆಟ್ ತಂಡ ಅತ್ಯಂತ ಭ್ರಷ್ಟ: ಐಸಿಸಿ

ಪಂತ್ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ವೇಳೆ ಪೈನ್ ಮತ್ತು ರಿಷಬ್ ಪಂತ್ ಸ್ಲೆಡ್ಜಿಂಗ್ ಮಾಡಿದ್ದು, ಸ್ಟಂಪ್ ಮೈಕ್‌ನಲ್ಲಿ ರೆಕಾರ್ಡ್  ಆಗಿತ್ತು. ಪೈನ್, ರಿಷಬ್ ಪಂತ್‌ರನ್ನು ಬೇಬಿ ಸಿಟ್ಟರ್ ಎಂದಿದ್ದರು. ಇದಕ್ಕೆ ಪಂತ್, ಆಸಿಸ್ ತಾತ್ಕಾಲಿಕ ನಾಯಕ ಎಂದು ಕಿಚಾಯಿಸಿದ್ದರು.