140 ಸೆಕೆಂಡ್‌ನಲ್ಲಿ 63 ಕೋಟಿ ಗೆದ್ದ ಫ್ಲಾಯ್ಡ್ ಮೇವೆದರ್
ಬಾಕ್ಸಿಂಗ್ ಮಾಸ್ಟರ್ ಫ್ಲಾಯ್ಡ್ ಮೇವೆದರ್ ಇತಿಹಾಸ ರಚಿಸಿದ್ದಾರೆ. ಕೇವಲ 140 ಸೆಕೆಂಡ್‌ಗಳಲ್ಲಿ ಎದುರಾಳಿಯನ್ನ ಹೊಡೆದುರುಳಿಸಿ ಬರೋಬ್ಬರಿ 63 ಕೋಟಿ ರೂಪಾಯಿ ಪ್ರಶಸ್ತಿ ಮೊತ್ತವನ್ನ ಪಡೆದಿದ್ದಾರೆ. ಇಲ್ಲಿದೆ ಈ ರೋಚಕ ಪಂದ್ಯದ ವಿವರ.
ಲಂಡನ್(ಜ.02): ಬಾಕ್ಸಿಂಗ್ ಮಾಸ್ಟರ್ ಫ್ಲಾಯ್ ಮೇವೆದರ್ ಮತ್ತೊಂದು ಇತಿಹಾಸ ರಚಿಸಿದ್ದಾರೆ. ಅದು ಕೇವಲ 9 ನಿಮಿಷದ ಪಂದ್ಯವಾಗಿತ್ತು. ಬಹುಮಾನ ಮೊತ್ತ ಬರೋಬ್ಬರಿ 63 ಕೋಟಿ ರೂಪಾಯಿ. 9 ನಿಮಿಷಗಳ ಪಂದ್ಯವನ್ನ ಕೇವಲ 2 ನಿಮಿಷ 20 ಸೆಕೆಂಡ್‌ಗಳಲ್ಲಿ ಮುಗಿಸಿದ ಫ್ಲಾಯ್ಡ್ ಮೇವೆದರ್ 63 ಕೋಟಿ ರೂಪಾಯಿ ಪ್ರಶಸ್ತಿ ಮೊತ್ತವನ್ನು ಪಡೆದಿದ್ದಾರೆ.
ಇದನ್ನೂ ಓದಿ: ಆಸ್ಟ್ರೇಲಿಯಾ ಪ್ರಧಾನಿ ಮಾರಿಸನ್ ಭೇಟಿ ಮಾಡಿದ ಕೊಹ್ಲಿ ಬಾಯ್ಸ್!
ಜಪಾನ್‌ನ ಕಿಕ್ ಬಾಕ್ಸರ್ ತನ್ಶಿನ್ ನಸುಕವಾ ವಿರುದ್ಧ ಹೋರಾಡಿದ ಮೇವೆದರ್ ದಾಖಲೆ ಬರೆದಿದ್ದಾರೆ. ಹೋರಾಟಕ್ಕೊ ಮೊದಲೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗೆಲುವಿನ ಸೂಚನೆ ನೀಡಿದ್ದರು. ಡಿಸೆಂಬರ್ 31 ರಂದು ಟೊಕಿಯೋದಲ್ಲಿ ಆಯೋಜಿಸಲಾದ ಬಾಕ್ಸಿಂಗ್ ಪಂದ್ಯದಲ್ಲಿ 5 ಬಾರಿ ಚಾಂಪಿಯನ್ ಮೇವೆದರ್ 140 ಸೆಕೆಂಡುಗಳಲ್ಲಿ ಪಂದ್ಯ ಮುಗಿಸಿದರು.
ಇದನ್ನೂ ಓದಿ: ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಸಂಭವನೀಯ ಟೀಂ ಇಂಡಿಯಾ!
ಈ ಮೂಲಕ ಮೇವೆದರ್ ಹೊಸ ವರ್ಷವನ್ನು 63 ಕೋಟಿಯೊಂದಿಗೆ ಆಚರಿಸಿದರು. ಈ ಪಂದ್ಯ ಗೆಲ್ಲುವ ಮೂಲಕ ಮೇವೆದರ್ ಮತ್ತೆ ಮನಿ ಮ್ಯಾನ್ ಅನ್ನೋದನ್ನ ಸಾಬೀತುಪಡಿಸಿದ್ದಾರೆ. ದೊಡ್ಡ ಮೊತ್ತ ಗೆದ್ದ ಮೇವೆದರ್ ಬಾಕ್ಸಿಂಗ್ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದಾರೆ.