ಈ ಮೊದಲು ದೆಹಲಿ ತಂಡವನ್ನು ಎಡಗೈ ಬ್ಯಾಟ್ಸ್'ಮನ್ ಗೌತಮ್ ಗಂಭೀರ್ ಮುನ್ನೆಡೆಸುತ್ತಿದ್ದರು.

ನವದೆಹಲಿ(ಫೆ.10): ಇದೇ 25ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟೂರ್ನಿಯಲ್ಲಿ ದೆಹಲಿ ತಂಡದ ನಾಯಕರಾಗಿ ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್ ಆಯ್ಕೆಯಾಗಿದ್ದಾರೆ. ಅನುಭವಿ ಗೌತಮ್ ಗಂಭೀರ್'ಗೆ ನಾಯಕತ್ವ ಸ್ಥಾನದಿಂದ ಕೋಕ್ ನೀಡಲಾಗಿದೆ.

Add Asianetnews Kannada as a Preferred SourcegooglePreferred

ಆರಂಭದಲ್ಲಿ ಶಿಖರ್ ಧವನ್ ಅವರಿಗೆ ತಂಡದ ನಾಯಕತ್ವ ಜವಾಬ್ದಾರಿ ನೀಡಬೇಕು ಎನ್ನುವ ಮಾತು ಕೇಳಿ ಬಂದಿತ್ತು. ಆ ನಂತರ ಆಯ್ಕೆ ಸಮಿತಿ ರಿಷಬ್ ಅವರನ್ನು ನಾಯಕರಾಗಿ ನೇಮಿಸಿದೆ.

ರಿಷಭ್, ಇಂಗ್ಲೆಂಡ್ ವಿರುದ್ಧದ ಬೆಂಗಳೂರಿನಲ್ಲಿ ನಡೆದ ಟಿ20 ಟೂರ್ನಿಯ ಕೊನೆಯ ಪಂದ್ಯದಲ್ಲಿ ರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಅದು ಕೇವಲ 3 ಎಸೆತಗಳಿಂದ 5 ರನ್‌'ಗಳಿಸಲಷ್ಟೇ ಸಾಧ್ಯವಾಗಿತ್ತು. 2016-17ನೇ ಸಾಲಿನ ರಣಜಿ ಟೂರ್ನಿಯ 8 ಪಂದ್ಯಗಳಲ್ಲಿ ಪಂತ್ 81ರ ಸರಾಸರಿಯಲ್ಲಿ 972 ರನ್ ಕಲೆಹಾಕಿದ್ದರು.

ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಉತ್ಸುಕರಾಗಿರುವ ರಿಷಭ್‌'ಗೆ ತಂಡದ ನಾಯಕತ್ವ ನೀಡಿರುವುದು ಅನುಕೂಲವಾಗಲಿದೆ ಎಂಬುದು ಆಯ್ಕೆಸಮಿತಿಯ ಲೆಕ್ಕಚಾರವಾಗಿದೆ.

ಈ ಮೊದಲು ದೆಹಲಿ ತಂಡವನ್ನು ಎಡಗೈ ಬ್ಯಾಟ್ಸ್'ಮನ್ ಗೌತಮ್ ಗಂಭೀರ್ ಮುನ್ನೆಡೆಸುತ್ತಿದ್ದರು.

ಇದೀಗ ಯುವ ಕ್ರಿಕೆಟಿಗ ಪಂತ್ ಆಶೀಷ್ ನೆಹ್ರಾ, ಗೌತಮ್ ಗಂಭೀರ್, ಇಶಾಂತ್ ಶರ್ಮಾ, ಶಿಖರ್ ಧವನ್ ಅವರಂತಹ ಹಿರಿಯ ಆಟಗಾರರನ್ನು ಹೇಗೆ ನಿಭಾಯಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.