ಹೈದರಾಬಾದ್[ಮೇ.07]: ಸನ್‌'ರೈಸರ್ಸ್‌ ಹೈದ್ರಾಬಾದ್ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಸ್ಥಾನವನ್ನು ತುಂಬಲು ಅಲೆಕ್ಸ್ ಹೇಲ್ಸ್ ಸೇರಿದಂತೆ ಯಾರಿಂದಲೂ ಸಾಧ್ಯವಿಲ್ಲ ಎಂದು ತಂಡದ ಹಾಲಿ ನಾಯಕ ಕೇನ್ ವಿಲಿಯಮ್ಸನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ವಾರ್ನರ್ ಅವರ ಸ್ಥಾನವನ್ನು ತುಂಬುವ ಕುರಿತು ನಾನು ಎಂದಿಗೂ ಯೋಚನೆಯೇ ಮಾಡಿಲ್ಲ. ಏಕೆಂದರೆ ಇದು ಅಸಾಧ್ಯವಾದುದು. ವಾರ್ನರ್ ವಿಶ್ವದ ಶ್ರೇಷ್ಠ ಟಿ20 ಬ್ಯಾಟ್ಸ್’ಮನ್’ಗಳಲ್ಲಿ ಒಬ್ಬರು. ಕಳೆದ ವರ್ಷ ಹೈದ್ರಾಬಾದ್ ಪರ ಸಹ ವಾರ್ನರ್ ಅತ್ಯುತ್ತಮ ಪ್ರದರ್ಶನ ತೋರಿದ್ದರು’ ಎಂದು ವಿಲಿಯಮ್ಸನ್ ಹೇಳಿದ್ದಾರೆ. 

ಚೆಂಡು ವಿರೂಪ ಪ್ರಕರಣದಡಿ ನಿಷೇಧಕ್ಕೆ ಒಳಗಾದ ವಾರ್ನರ್, ಐಪಿಎಲ್‌’ನಿಂದಲೂ ಹೊರಗುಳಿಯಬೇಕಾಯಿತು. ಈ ಹಿನ್ನೆಲೆಯಲ್ಲಿ ವಿಲಿಯಮ್ಸನ್‌’ಗೆ ಸನ್‌’ರೈಸರ್ಸ್‌ ಮುನ್ನಡೆಸುವ ಅವಕಾಶ ಲಭಿಸಿತು.
ವಾರ್ನರ್ ಅನುಪಸ್ಥಿತಿಯಲ್ಲಿಯೂ ಸನ್’ರೈಸರ್ಸ್ ಹೈದರಾಬಾದ್ ಉತ್ತಮ ಪ್ರದರ್ಶನ ತೋರುತ್ತಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.