ಇಂಗ್ಲೆಂಡ್ ವಿರುದ್ಧದ ಚುಟುಕು ಸರಣಿಯಿಂದ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ.

ನವದೆಹಲಿ(ಜ.28): ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಅವರ ಪತ್ನಿ ರೀವಾ ಶುಕ್ರವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಜಾಮ್‌'ನಗರದಲ್ಲಿನ ಜೋಗರ್ಸ್‌ ಪಾರ್ಕ್‌ನ ಪಾರ್ಕ್ ಕಾಲೋನಿ ಸೊಸೈಟಿಯ ತಮ್ಮ ನಿವಾಸದ ಬಳಿ ಜಡೇಜಾ ದಂಪತಿ ಇದ್ದ ಆಡಿ ಕಾರ್ ಮೊಪೆಡ್ ಒಂದಕ್ಕೆ ಹಿಂದಿನಿಂದ ಬಡಿದಿದೆ. ಮೊಪೆಡ್ ಅನ್ನು ಓಡಿಸುತ್ತಿದ್ದ ಪ್ರೀತಿ ಶರ್ಮಾ ಎಂಬ ಯುವತಿ ಕೆಳಬಿದ್ದು ಸಣ್ಣಪುಟ್ಟ ಗಾಯಕ್ಕೆ ತುತ್ತಾದಳು. ಒಡನೆಯೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದ ಜಡೇಜಾ, ಆಕೆಗೆ ಸೂಕ್ತ ಚಿಕಿತ್ಸೆ ಕೊಡಿಸಿದರು.

ಸದ್ಯ ಪ್ರೀತಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅಂದಹಾಗೆ ಇಂಗ್ಲೆಂಡ್ ವಿರುದ್ಧದ ಚುಟುಕು ಸರಣಿಯಿಂದ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ.