ಪುಣೆ[ಮೇ.07]: ಶನಿವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಪಡೆದಾಗ ತಾನು ಸಂಭ್ರಮಿಸದಿರಲು ಕಾರಣ ಏನೆಂಬುದನ್ನು ಸಿಎಸ್‌'ಕೆ ತಂಡದ ರವೀಂದ್ರ ಜಡೇಜಾ ಇದೀಗ ಬಹಿರಂಗಗೊಳಿಸಿದ್ದಾರೆ. 

‘ಪವರ್ ಪ್ಲೇ ನಂತರ ಎಸೆದ ಮೊದಲ ಓವರ್‌'ನ ಮೊದಲ ಬಾಲ್‌'ನಲ್ಲೇ ವಿಕೆಟ್ ಸಿಗುತ್ತದೆ ಎಂದು ನಾನು ಊಹಿಸಿಯೂ ಇರಲ್ಲಿಲ್ಲ. ಈ ಬಗ್ಗೆ ಚಿಂತಿಸಲೂ ನನಗೆ ಸಮಯ ಇರಲಿಲ್ಲ’ ಎಂದಿದ್ದಾರೆ. ಆದರೆ, ಜಡೇಜಾರ ಈ ಹೇಳಿಕೆ ಭಾರೀ ಟ್ರೋಲ್ ಆಗಿದ್ದು, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ವಿರಾಟ್ ವಿಕೆಟ್ ಪಡೆದರೂ ಜಡೇಜಾ ಸಂಭ್ರಮಿಸಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಜಡ್ಡು ಕಾಲೆಳೆದಿದ್ದಾರೆ.

ಪುಣೆಯಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್’ಕಿಂಗ್ಸ್ 6 ವಿಕೆಟ್’ಗಳ ಭರ್ಜರಿ ಜಯ ಸಾಧಿಸಿತ್ತು.